ಮುಂಬೈ, ಜೂ.20- ತಮಿಳುನಾಡಿನ ಚೆಲುವೆ ಅನುಕೀರ್ತಿ ವಾಸ್ ಫೆಮಿನಾ ಮಿಸ್ ಇಂಡಿಯಾ ವಲ್ರ್ಡ್-2018 ಕಿರೀಟ ಲಭಿಸಿದೆ. ಮುಂಬೈನ ಸರ್ದಾರ್ ವಲ್ಲಭಭಾಯ್ ಪಟೇಲ್ ಕ್ರೀಡಾಂಗಣದಲ್ಲಿ ನಿನ್ನೆ ರಾತ್ರಿ ನಡೆದ ವರ್ಣರಂಜಿತ 55ನೇ ಫೆಮಿನಾ ಮಿಸ್ ಇಂಡಿಯಾ ವಲ್ರ್ಡ್-2018ರ ಅತ್ಯಂತ ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆಯಲ್ಲಿ 19 ವರ್ಷದ ಕಾಲೇಜು ಕನ್ಯೆ ಅನುಕೀರ್ತಿ ವಾಸ್ ವಿಜೇತರಾಗಿ ಗೆಲುವಿನ ಮುಗುಳ್ನಗೆ ಬೀರಿದರು. 2017ರ ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಅನುಕೀರ್ತಿಗೆ ಸೌಂದರ್ಯ ಕೀರ್ತಿ ಕಿರೀಟ ತೊಡಿಸಿ ಅಭಿನಂದಿಸಿದರು. ಹರ್ಯಾಣದ ಮೀನಾಕ್ಷಿ ಚೌಧರಿ ಪಥಮ ರನ್ನರ್ ಅಪ್ ಪ್ರಶಸ್ತಿ ಪಡೆದರೆ, ಆಂಧ್ರಪ್ರದೇಶದ ಬೆಡಗಿ ಶ್ರೇಯಾ ರಾವ್ ದ್ವಿತೀಯ ರನ್ನರ್ ಆಫ್ ಆದರು.
ತಮಿಳುನಾಡಿನ ರೂಪರಾಶಿ ಅನುಕೀರ್ತಿ ಚೆನ್ನೈನ ಲೊಯೊಲಾ ಕಾಲೇಜಿನಲ್ಲಿ ಬಿಎ (ಫ್ರೆಂಚ್) ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಫ್ರೆಂಚು ದುಬಾಷಿಯಾU ಬೇಕೆಂಬದು ಈ ಪ್ರತಿಭಾನ್ವಿತೆಯ ಬಯಕೆ. ಮಿಸ್ ಇಂಡಿಯಾ ವಲ್ರ್ಡ್-2018 ಪ್ರಶಸ್ತಿಗೆ ಪಾತ್ರವಾಗಿರುವ ಅನುಗೆ ಸೂಪರ್ ಮಾಡೆಲ್ ಆಗಬೇಕೆಂಬ ಇಚ್ಚೆಯೂ ಸಹಜವಾಗಿದೆ.
ತೀರ್ಪುಗಾರರ ಸಮಿತಿಯಲ್ಲಿ ಬಾಲಿವುಡ್ ಖ್ಯಾತನಾಮರಾದ ಬಾಬಿ ಡಿಯೋಲ್, ಕುನಾಕ್ ಕಪೂರ್, ಮಲೈಕಾ ಅರೋರಾ, ಪ್ಯಾಷನ್ ಡಿಸೈನರ್ ಗೌರವ್ ಗುಪ್ತಾ ಮತ್ತು ಕ್ರಿಕೆಟ್ ಪಟು ಇರ್ಫಾನ್ ಪಠಾಣ್ ಇದ್ದರು. ವಿಶ್ವ ಸುಂದರಿ ಮಾನುಷಿ ಚಿಲ್ಲರ್ ವಿಶೇಷ ತೀರ್ಪುಗಾರರಾಗಿದ್ದರು. ಬಾಲಿವುಡ್ ಚಿತ್ರ ನಿರ್ಮಾಪಕ-ನಿರ್ದೇಶಕ ಕರಣ್ ಜೋಹರ್, ನಟ ಆಯುಷ್ಮಾನ್ ಖುರಾನಾ, ತಾರೆಯರಾದ ಜಾಕ್ವೆಲಿನ್ ಫರ್ನಾಂಡಿಸ್, ಮಾಧುರಿ ದೀಕ್ಷಿತ್, ಕರೀನಾ ಕಪೂರ್ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬಿ-ಟೌನ್ ತಾರೆಯರ ನೃತ್ಯ ಕಾರ್ಯಕ್ರಮಗಳು ವಿಶೇಷ ಮೆರಗು ನೀಡಿದವು. ಪೆÇೀಲೆಂಡ್ ವಿರುದ್ಧ ಸೆನೆಗಲ್ಗೆ ಐತಿಹಾಸಿಕ ಜಯ