ಸೃಜನಶೀಲತೆಯನ್ನು ಪೆÇೀಷಿಸುವುದು ಶೈಕ್ಷಣಿಕ ಸಂಸ್ಥೆಗಳ ಪಾತ್ರ – ಡಾ. ಗೀತಾ ಹೆಗ್ಡೆ

 

ಬೆಂಗಳೂರು, ಜೂ.20-ಸುಸ್ಥಿರ ಭವಿಷ್ಯಕ್ಕಾಗಿ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲು ಸಿದ್ಧವಾಗುತ್ತಿರುವ ಪೀಳಿಗೆಗೆ ಶೈಕ್ಷಣಿಕ ತರಬೇತಿ ನೀಡುವುದು ಮಾತ್ರವಲ್ಲದೆ, ಅವರ ಸೃಜನಶೀಲತೆಯನ್ನು ಪೆÇೀಷಿಸುವುದು ಶೈಕ್ಷಣಿಕ ಸಂಸ್ಥೆಗಳ ಪಾತ್ರ ಮುಖ್ಯವಾಗಿರುತ್ತದೆ ಎಂದು ಐಎಫ್‍ಐಎಂ ಬ್ಯುಸಿನೆಸ್ ಸ್ಕೂಲ್‍ನ ನಿರ್ದೇಶಕರಾದ ಡಾ. ಗೀತಾ ಹೆಗ್ಡೆ ಹೇಳಿದರು.

ಐಎಫ್‍ಐಎಂ ಬ್ಯುಸಿನೆಸ್ ಸ್ಕೂಲ್‍ನ 22ನೇ ವಾರ್ಷಿಕ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ವರು ಪದವಿ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದಿಸಿದರಲ್ಲದೆ, ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿ, ಉದ್ಯೋಗಾವಕಾಶ ಕೈಗಾರಿಕೆ ಸತತವಾಗಿ ವಿಕಾಸಗೊಳ್ಳುತ್ತಿದೆ. ಆದ್ದರಿಂದ ಹೊಸ ಹೊಸ ವ್ಯವಸ್ಥೆಗಳಿಗೆ ಹೊಂದಿಕೊಳ್ಳಲು ಮತ್ತು ಹೆಚ್ಚು ಉತ್ತಮವಾದ ನವೀನತೆಗಳನ್ನು ಹೊರತರುವುದಕ್ಕೆ ಸಜ್ಜಾಗಲು ಅಗತ್ಯ ಕೌಶಲ್ಯಗಳು ಮತ್ತು ಅನುಭವಗಳು ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಇರಲೇಬೇಕು ಎಂದರು.

193 ವಿದ್ಯಾರ್ಥಿಗಳು ತಮ್ಮ ಸ್ನಾತಕೋತ್ತರ ಡಿಪೆÇ್ಲಮೊ (ಪಿಜಿಡಿಎಂ)ಗಳನ್ನು ಬಯೋ ಕಾನ್ ಲಿಮಿಟೆಡ್‍ನ ಚೇರ್ಮನ್ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಡಾ. ಕಿರಣ್ ಮಜುಂದಾರ್ ಷಾ ಅವರಿಂದ ಸ್ವೀಕರಿಸಿದರು.
ಡಾ. ಕಿರಣ್ ಮಜುಂದಾರ್ ಷಾ ಮಾತನಾಡಿ, ನಾವು ಬದುಕುವ, ಕೆಲಸ ಮಾಡುವ, ಪರಸ್ಪರ ನಿರೂಪಿಸಿಕೊಳ್ಳುವ ಮಾರ್ಗವನ್ನು ಮೂಲದಲ್ಲಿ ಬದಲಾಯಿಸುವ ತಂತ್ರಜ್ಞಾನಗಳ ಜನನವನ್ನು ನಾವು ವೀಕ್ಷಿಸುತ್ತಿದ್ದೇವೆ. ಈ ಪರಿವರ್ತನೆಯ ಪ್ರಮಾಣ, ಅವಕಾಶ ಮತ್ತು ಸಂಕೀರ್ಣತೆ ಮಾನವಜಾತಿ ಹಿಂದೆಂದಿಗೂ ಅನುಭವಿಸಿದಂತೆ ಇರುವುದು ಅಸಾಧ್ಯ ಎಂದರು.
ಸೆಂಟರ್ ಫಾರ್ ಡೆವಲಪ್‍ಮೆಂಟ್ ಎಜುಕೇಷನ್(ಸಿಡಿಇ) ನ ಚೇರ್ಮನ್ ವಿ.ಬಿ. ಪಾಡೋಡೆ ಮತ್ತು ಕಾಪೆರ್Çೀರೇಟ್ ಜಗತ್ತಿನ ಗಣ್ಯರು, ಐಎಫ್‍ಐಎಂನ ಆಡಳಿತ ಮಂಡಳಿ ಸದಸ್ಯರು, ಪದವಿ ಪಡೆದ ಮತ್ತು ಪದವೀಧರರು ಮತ್ತು ಅವರ ಹೆಮ್ಮೆಯ ಪೆÇೀಷಕರು ಮುಂತಾದವರು ಭಾಗವಹಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ