ಕೇಂದ್ರ ಸರ್ಕಾರ ರಂಜಾನ್ ಕದನ ವಿರಾಮ ರದ್ದು, ಭಯೋತ್ಪಾದಕರ ಬೇಟೆ!

ಶ್ರೀನಗರ, ಜೂ.20-ಜಮ್ಮು ಮತ್ತು ಕಾಶ್ಮೀರದಲ್ಲಿ ಕೇಂದ್ರ ಸರ್ಕಾರ ರಂಜಾನ್ ಕದನ ವಿರಾಮ ರದ್ದುಗೊಳಿಸಿದ ಮೂರನೇ ದಿನ ಸೇನಾ ಪಡೆಗಳು ಭಯೋತ್ಪಾದಕರ ಬೇಟೆ ಮುಂದುವರಿಸಿವೆ. ಪಾಕಿಸ್ತಾನದ ನಿಷೇಧಿತ ಉಗ್ರಗಾಮಿ ಸಂಘಟನೆ ಜೈಷ್-ಎ-ಮಹಮದ್ (ಜೆಇಎಂ)ಗೆ ಸೇರಿದ ನಾಲ್ವರು ಉಗ್ರರನ್ನು ಭಾರತೀಯ ಸೇನೆ ಪುಲ್ವಾಮಾ ಜಿಲ್ಲೆಯಲ್ಲಿ ಹೊಡೆದುರುಳಿಸಿದೆ. ಈ ಘಟನೆಯಲ್ಲಿ ಸಿಆರ್‍ಪಿಎಫ್‍ನ ಇಬ್ಬರು ಯೋಧರೂ ಗಾಯಗೊಂಡಿದ್ದಾರೆ. ತ್ರಾಲ್ ಪ್ರದೇಶದಲ್ಲಿ ನಕ್ಸಲರು ಅವಿತಿಟ್ಟುಕೊಂಡಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಸಿಆರ್‍ಪಿಎಫ್ ಯೋಧರು ಆ ಪ್ರದೇಶವನ್ನು ಸುತ್ತುವರಿದಾಗ ಗುಂಡಿನ ಕಾಳಗ ನಡೆಯಿತು. ಈ ಎನ್‍ಕೌಂಟರ್‍ನಲ್ಲಿ ಮೂವರು ಉಗ್ರರು ಹತರಾದರು. ಆ ಸ್ಥಳದಿಂದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಉನ್ನತ ಪೆÇಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ