ಬೆಂಗಳೂರು: ಎಟಿಎಂ… ಹಣವನ್ನು ನೀಡುವ ಯಂತ್ರ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಈಗ ಹಣ ನುಂಗಿರುವ ಘಟನೆ ನಗರದ ಬೇಗೂರು ರಸ್ತೆಯಲ್ಲಿರುವ ಎಟಿಎಂವೊಂದರಲ್ಲಿ ನಡೆದಿದೆ.
ಬೇಗೂರು ರಸ್ತೆಯಲ್ಲಿರುವ ಎಚ್ ಡಿ ಎಫ್ ಸಿ ಬ್ಯಾಂಕ್ ಎಟಿಎಂ ಹಣ ನುಂಗುತ್ತಿದೆ. ನಗರದ ಮಹೇಶ್ ಎಂಬವರು ಈ ಎಟಿಎಂ ನಲ್ಲಿ 10 ಸಾವಿರ ರೂ. ಡ್ರಾ ಮಾಡಿದ್ದಾರೆ. ಆದರೆ ಅವರ ಕೈಗೆ ಸೇರಿರೋದು ಬರೀ ಒಂದು ಸಾವಿರ ರೂಪಾಯಿ ಮಾತ್ರ. ಆದರೆ ಅವರ ಬ್ಯಾಂಕ್ ಅಕೌಂಟ್ ನಲ್ಲಿ ಮಾತ್ರ 10 ಸಾವಿರ ರೂಪಾಯಿ ತೆಗೆದಿದ್ದೀರಿ ಎಂದು ತೋರಿಸುತ್ತಿದೆ.
ಎಟಿಎಂ ಈ ರೀತಿ ಹಣ ನುಂಗುವ ವಿಚಾರವನ್ನು ಸ್ವತಃ ಮಹೇಶ್ ವೀಡಿಯೊ ಮಾಡಿದ್ದಾರೆ. ಈ ಕುರಿತಂತೆ ಎಚ್‍ಡಿಎಫ್‍ಸಿ ಬ್ಯಾಂಕಿಗೆ ದೂರನ್ನೂ ಕೂಡಾ ನೀಡಿದ್ದಾರೆ. ಕಳೆದ ಎರಡು ದಿನಗಳಿಂದ ಈ ರೀತಿ ಗ್ರಾಹಕರಿಗೆ ಎಟಿಎಂ ಮೋಸ ಮಾಡುತ್ತಿದೆ. ಈ ವಿಚಾರ ಕುರಿತು ಮಹೇಶ್, ಬ್ಯಾಂಕ್ ಅಧಿಕಾರಿಗಳಿಗೆ ದೂರನ್ನು ನೀಡಿದ್ದಾರೆ. ಆದರೆ ಬ್ಯಾಂಕ್ ನ ಸಿಬ್ಬಂದಿ ಮಾತ್ರ ಕ್ಯಾರೇ ಎನ್ನುತ್ತಿಲ್ಲ ಎಂದು ಹಣ ಕಳೆದುಕೊಂಡ ಗ್ರಾಹಕ ಮಹೇಶ್ ದೂರಿದ್ದಾರೆ.
ಸಾರ್ವಜನಿಕರಲ್ಲಿ ಈ ಕುರಿತು ಭಯ ಕಾಡುತ್ತಿದೆ. ಬ್ಯಾಂಕುಗಳು ಹಣ ಇಡೋಕೆ ಹೆಚ್ಚು ಸೇಫ್. ಎಟಿಎಂ ಮೂಲಕ ಎಲ್ಲಿ ಬೇಕಾದ್ರೂ ಹಣ ಪಡೆಯಬಹುದು ಅಂತಾರೆ. ಆದರೆ ಈ ರೀತಿ ಬ್ಯಾಂಕ್ ಎಟಿಎಂಗಳೇ ಹಣ ನುಂಗಿದರೆ ನಮ್ಮ ಗತಿ ಏನು ಅಂತಾ ಗ್ರಾಹಕರು ಭಯಪಡುತ್ತಿದ್ದಾರೆ.