ವಾಷಿಂಗ್ಟನ್, ಜೂ.19-ಅಮೆರಿಕ ಮತ್ತು ಚೀನಾ ನಡುವೆ ವಾಣಿಜ್ಯ ಸಮರ ತೀವ್ರ ಉಲ್ಬಣಗೊಂಡಿರುವಾಗಲೇ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಂದು ಬೆದರಿಕೆಯ ಬಾಂಬ್ ಸಿಡಿಸಿದ್ದಾರೆ. ಅಕ್ರಮ ವ್ಯಾಪಾರ-ವಹಿವಾಟು ದಂಧೆಯನ್ನು ನಿಲ್ಲಿಸದಿದ್ದರೆ ಚೀನಾ ಸರಕುಗಳ ಮೇಲೆ ಮತ್ತೆ ಹೆಚ್ಚುವರಿಯಾಗಿ 200 ಶತಕೋಟಿ ಡಾಲರ್ಗಳ ಸುಂಕ ವಿಧಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇದಕ್ಕೆ ದಿಟ್ಟ ಪ್ರತ್ಯುತ್ತರ ನೀಡಿರುವ ಚೀನಾ, ಅಮೆರಿಕದ ಬ್ಲಾಕ್ಮೇಲ್ ಬೆದರಿಕೆಗೆ ತಾನು ಮಣಿಯುವುದಿಲ್ಲ. ಅಮೆರಿಕ ಮತ್ತೆ ಸುಂಕ ವಿಧಿಸಿದರೆ ಅಷ್ಟೇ ಮೊತ್ತದ ತೆರಿಗೆಯನ್ನು ಆ ದೇಶದ ಸರಕುಗಳ ಮೇಲೆ ಹೇರುವುದಾಗಿ ತಿಳಿಸಿದೆ. ಈ ಬೆಳವಣಿಗೆಯಿಂದಾಗಿ ವಿಶ್ವದ ಎರಡು ಬೃಹತ್ ಆರ್ಥಿಕ ರಾಷ್ಟ್ರಗಳ ನಡುವಣ ವಾಣಿಜ್ಯ ಸಮರ ಇನ್ನಷ್ಟು ಉಲ್ಬಣಗೊಂಡಿದೆ. ಚೀನಾ ಅಕ್ರಮ ವ್ಯಾಪಾರ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಕಳೆದ ವಾರ ಟ್ರಂಪ್ ಚೀನಿ ಸರಕುಗಳ ಮೇಲೆ 50 ಶತಕೋಟಿ ಡಾಲರ್ಗಳ ಸುಂಕ ವಿಧಿಸಿತ್ತು.