ಕನಕಪುರ, ಜೂ.18- ಒಲವಿನ ಉಡುಗೊರೆ ಚಿತ್ರಕಥೆಯಂತೆ ತಾಲ್ಲೂಕಿನೊಂದು ಪ್ರೇಮ ಕಥೆಗೆ ಯುವಕ ಬಲಿಯಾಗಿರುವ ಘಟನೆ ಹಾರೋಹಳ್ಳಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪ್ರೀತಿಸಿ ಮೋಸ ಹೋದೆನೆಂದು ಮನನೊಂದ ಯುವಕನೊಬ್ಬ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಗಬ್ಬಾಡಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ವಾಸಿ ಅರುಣ್ಕುಮಾರ್ (20) ಆತ್ಮಹತ್ಯೆಗೆ ಶರಣಾದ ಯುವಕ.
ಅರುಣ್ಕುಮಾರ್ ಹಾರೋಹಳ್ಳಿ ಕಾಲೇಜೊಂದರಲ್ಲಿ ಪ್ರಥಮ ವರ್ಷದ ಬಿಎ ವ್ಯಾಸಂಗ ಮಾಡುತ್ತಿದ್ದು, ಹಲವು ವರ್ಷಗಳಿಂದ ಅರುಣ್ಕುಮಾರ್ ಯುವತಿಯೊಬ್ಬಳ ಜೊತೆ ಪ್ರೀತಿ-ಪ್ರೇಮದಲ್ಲಿದ್ದು, ಇತ್ತೀಚೆಗೆ ಅಪಘಾತದಲ್ಲಿ ತೀವ್ರ ಗಾಯಗೊಂಡು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದ.
ಆನಂತರ ಅರುಣ್ಕುಮಾರ್ನ ಮುಖದ ರೂಪ ಬದಲಾಗಿದ್ದರಿಂದ ಯುವತಿ ಅರುಣ್ಕುಮಾರ್ನೊಂದಿಗೆ ಸಂಪರ್ಕ ಕಡಿಮೆ ಮಾಡಿದ್ದಾಳೆ. ನಂತರ ತನ್ನನ್ನು ಪ್ರೀತಿಸುವಂತೆ ಅರುಣ್ ಕೇಳಿದಾಗ ಯುವತಿ ನಿರಾಕರಿಸಿದ್ದಾಳೆ.
ಇದರಿಂದ ಮನನೊಂದ ಅರುಣ್ಕುಮಾರ್ ಗಬ್ಬಾಡಿ ಬಳಿ ಪೈಪ್ಲೈನ್ ರಸ್ತೆಯ ಬೇವಿನ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಹಾರೋಹಳ್ಳಿ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ಮೃತ ದೇಹವನ್ನು ಬೆಂಗಳೂರಿನ ಆರ್.ಆರ್. ಆಸ್ಪತ್ರೆಯಲ್ಲಿ ಶವಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ.