
ಲಕ್ನೋ: ಲಕ್ನೋ ಸಮೀಪದ ಅಮಿನ್ ಗ್ರಾಮದಲ್ಲಿ ರೋಡ್ ರೋಲರ್ ಹತ್ತಿ 14 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಇನ್ನು ಮತ್ತೊಬ್ಬ ಬಾಲಕನ ಸ್ಥಿತಿ ಗಂಭೀರವಾಗಿದೆ.
ಕಳೆದ ರಾತ್ರಿ ಈ ಘಟನೆ ನಡೆದಿದೆ. ರಾತ್ರಿ ಮಕ್ಕಳು ಮನೆಯ ಹೊರಗೆ ಈ ಮಕ್ಕಳು ಮಲಗಿದ್ದರು ಎನ್ನಲಾಗಿದೆ. ಅಬಿದ್ ಘಟನೆಯಲ್ಲಿ ಮೃತಪಟ್ಟರೆ, ಆತನ ಸಹೋದರ 13 ವರ್ಷದ ಶಕೀಲ್ ಗಂಭೀರವಾಗಿ ಗಾಯಗೊಂಡಿದ್ದು, ಲಕ್ನೋದ ತ್ರುಮಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಗೌರಿಗಂಜ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ರೋಲರ್ ಚಾಲಕನ ಪತ್ತೆಗೆ ಬಲೆ ಬೀಸಿದ್ದಾರೆ.