
ಮೈಸೂರು, ಜೂ.18- ವೃದ್ಧರೊಬ್ಬರು ರೈಲಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ಇಂದು ಮುಂಜಾನೆ ನಂಜನಗೂಡಿನ ಮಲ್ಲನಮೂಲೆ ಬಳಿ ಸಂಭವಿಸಿದೆ. ಸೋನಹಳ್ಳಿ ವಾಸಿ ಸಿದ್ದಪ್ಪ (75) ಮೃತ ದುರ್ದೈವಿ.
ಬಸ್ ನಿಲ್ದಾಣಕ್ಕೆ ತೆರಳಲು ರೈಲ್ವೆ ಟ್ರ್ಯಾಕ್ ಮೇಲೆ ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ.
ಸಿದ್ದಪ್ಪ ಅವರಿಗೆ ಕಿವಿ ಕೇಳದ ಕಾರಣ ರೈಲು ಬಂದದ್ದು ತಿಳಿಯಲಿಲ್ಲ. ರೈಲು ವೇಗವಾಗಿ ಬಂದು ಇವರಿಗೆ ಡಿಕ್ಕಿ ಹೊಡೆದು ಇವರ ಮೇಲೆ ಹರಿದ ಕಾರಣ ಸ್ಥಳದಲ್ಲೇ ಅಸುನೀಗಿದ್ದಾರೆ. ರೈಲ್ವೆ ಪೆÇಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.