ಬೆಂಗಳೂರು:ಜೂ-18: ಬನ್ನೇರುಘಟ್ಟ ಜೈವಿಕ ಉದ್ಯಾನ ವನಕ್ಕೆ ಅರಣ್ಯ ಮತ್ತು ಪರಿಸರ ಸಚಿವ ಆರ್ ರವಿಶಂಕರ್ ಧಿಡೀರ್ ಬೇಟಿ ನೀಡಿ ಉದ್ಯಾನ ವನದ ಸಿಬ್ಬಂದಿ ಜೊತೆ ಚರ್ಚೆ ನಡೆಸಿದರು.
ಸಚಿವರಾದ ಮೇಲೆ ಮೊದಲನೇ ಬಾರಿಗೆ ಆರ್.ಶಂಕರ್ ಉದ್ಯಾನ ವನಕ್ಕೆ ಭೇಟಿ ನೀಡಿದ್ದು, ಒಂದು ಗಂಟೆಯಿಂದ ಬನ್ನೇರುಘಟ್ಟ ಸುತ್ತಮುತ್ತ ಮಳೆಯಾಗುತ್ತಿದ್ದು ಮಳೆಯಲ್ಲೆ ಭೇಟಿ ಕೊಟ್ಟ ಸಚಿವರು ಉದ್ಯಾನ ವನದ ಕಛೇರಿ ಮುಂದೆ ಗಿಡನೆಟ್ಟರು.
ಸಚಿವರು ಬಂದರು ಅಧಿಕಾರಿಗಳಿಲ್ಲದೆ ಇರುವುದಕ್ಕೆ ಆಕ್ರೋಶಗೊಂಡ ಸಚಿವರು ಜೈವಿಕ ಉದ್ಯಾನ ವನದ ಡಿಡಿ ಕುಶಾಲಪ್ಪರನ್ನು ತರಾಟೆಗೆ ತೆಗೆದು ಕೊಂಡರು.
ಜೈವಿಕ ಉದ್ಯಾನ ವನದಲ್ಲಿ ಸುತ್ತಾಡಿ ಪ್ರವಾಸಿಗರ ಬಳಿ ಇಲ್ಲಿನ ವ್ಯವಸ್ಥೆಯನ್ನು ವಿಚಾರಿಸಿದರು. ಇದೇವೇಳೆ ಸಫಾರಿ ನೋಡಲು ವಾಹನ ವಿಲ್ಲದೆ ಸಚಿವರು ೩೦ ನಿಮಿಷ ಉದ್ಯಾನ ವನದಲ್ಲೆ ಕಾಲ ಕಳೆದರು.
Bannerghatta Biological Park,Minister of Forest and Environment