ದಾಂಡೇಲಿ: ಉದ್ಯಮಗಳ ಸಾಮಾಜಿಕ ಹೊಣೆಗಾರಿಕೆಯಡಿ ದಾಂಡೇಲಿಯ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯವರು ದಾಂಡೇಲಿ ಹಾಗೂ ಹಳಿಯಾಳದ ಸರಕಾರಿ ಆಸ್ಪತ್ರೆಗಳಿಗೆ ಶವ ಪೆಟ್ಟಿಗೆ (ಶೈತ್ಯಾಗಾರ) ಯನ್ನು ಕೊಡುಗೆಯಾಗಿ ನೀಡಿದರು.
ಶವ ಪೆಟ್ಟಿಗೆಯ ಮೌಲ್ಯ ಸುಮಾರು ಎರಡು ಲಕ್ಷ ರೂ.ಗಳಾಗಿದ್ದು, ಹಳಿಯಾಳ ಹಾಗೂ ದಾಂಡೇಲಿಯ ಸರಕಾರಿ ಆಸ್ಪತ್ರಗೆ ತಲಾ ಒಂದರಂತೆ ನೀಡಲಾಗಿದೆ. ಇದರಿಂದ ದಾಂಡೇಲಿ ಹಾಗೂ ಹಳಿಯಾಳದ ಜನರಿಗೆ ಬಹಳಷ್ಟು ಉಪಯುಕ್ತವಾಗಲಿದೆ. ಈ ಸಂದರ್ಭದಲ್ಲಿ ವೆಸ್ಟ್ ಕೋಸ್ಟ್ ಪೇಪರ್ ಮಿಲ್ ನ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ ತಿವಾರಿ, ಎಸ್.ಜಿ. ಮಾರಿಹಾಳ, ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳು ಉಪಸ್ಥಿತರಿದ್ದರು.






