ಬೆಂಗಳೂರು, ಜೂ.17-ಕೆಲಸ ಮುಗಿಸಿಕೊಂಡು ಬೈಕ್‍ನಲ್ಲಿ ತೆರಳುತ್ತಿದ್ದ ಟೆಕ್ಕಿಯೊಬ್ಬನನ್ನು ಅಡ್ಡಗಟ್ಟಿದ ದುಷ್ಕರ್ಮಿಗಳ ತಂಡ ಆತನನ್ನು ಬೆದರಿಸಿ ಡ್ಯೂಕ್‍ಬೈಕ್‍ನ್ನು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಇಂದು ಮುಂಜಾನೆ 2.30ರ ಸಂದರ್ಭದಲ್ಲಿ ಪ್ರಕಾಶ್‍ನಗರದಲ್ಲಿ ನಡೆದಿದೆ.
ಐಟಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ವೈಭವ್ ಅವರ ನಿವಾಸ ರಾಜಾಜಿನಗರದ 6ನೇ ಬ್ಲಾಕ್‍ನಲ್ಲಿದ್ದು, ತನ್ನ ಸಹೋದ್ಯೋಗಿ ಸ್ನೇಹಿತನೊಂದಿಗೆ ಕ್ಯಾಬ್‍ನಲ್ಲಿ ಪ್ರಕಾಶ್‍ನಗರಕ್ಕೆ ಬಂದಿದ್ದಾರೆ.
ಅಲ್ಲಿ ನಿಲ್ಲಿಸಿದ್ದ ತಮ್ಮ ಬೈಕ್‍ನ್ನು ತೆಗೆದುಕೊಂಡು ಪ್ರಕಾಶ್‍ನಗರದ 3ನೇ ಕ್ರಾಸ್‍ನಲ್ಲಿ ಹೋಗುವಾಗ ಝೆನ್ ಕಾರಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಅವರನ್ನು ಅಡ್ಡಗಟ್ಟಿದ್ದಾರೆ.
ನಂತರ ಕಾರಿನಿಂದ ಇಳಿದ ಇಬ್ಬರು ಮಾರಕಾಸ್ತ್ರಗಳಿಂದ ವೈಭವ್‍ನನ್ನು ಬೆದರಿಸಿ ಬೈಕ್ ಕಿತ್ತುಕೊಂಡು ರಾಜ್‍ಕುಮಾರ್‍ರಸ್ತೆಯ ಮೂಲಕ ಪರಾರಿಯಾಗಿದ್ದಾರೆ ಎಂದು ಪೆÇಲೀಸ್ ಮೂಲಗಳು ತಿಳಿಸಿವೆ.
ರಾಜಾಜಿನಗರ ಪೆÇಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.