ಶ್ರೀನಗರ, ಜೂ.16-ಈದ್-ಉಲ್-ಫಿತರ್ ಆಚರಣೆ ಸಂದರ್ಭದಲ್ಲೂ ಕಣಿವೆ ರಾಜ್ಯ ಕಾಶ್ಮೀರದಲ್ಲಿ ಹಿಂಸಾಚಾರ ಮುಂದುವರಿದಿದೆ. ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಘರ್ಷಣೆ ವೇಳೆ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ. ಅನಂತನಾಗ್ ಜಿಲ್ಲೆಯ ಬ್ರಾಕ್ಪೆÇರದಲ್ಲಿ ನಡೆದ ಘರ್ಷಣೆ ವೇಳೆ ಗಾಯಗೊಂಡಿದ್ದ ಶೀರಝ್ ಅಹಮದ್ ಎಂಬುವರು ಮೃತಪಟ್ಟರು. ಸಫಕದಲ್ ಪ್ರದೇಶದಲ್ಲಿ ನಡೆದ ಘರ್ಷಣೆ ವೇಳೆ ಅಹಮದ್ ಮತ್ತು ಕೆಲವರು ಗಾಯಗೊಂಡಿದ್ದರು. ಈ ಮಧ್ಯೆ ಕಾಶ್ಮೀರದಲ್ಲಿ ವ್ಯಾಪಕ ಬಂದೋಬಸ್ತ್ ನಡುವೆ ರಂಜಾನ್ ಆಚರಿಸಲಾಗುತ್ತಿದೆ.