ಯಾರಾಗಲಿದ್ದಾರೆ ಮುಂದಿನ ರಾಜ್ಯ ಮುಖ್ಯ ಕಾರ್ಯದರ್ಶಿ….?

 

ಬೆಂಗಳೂರು, ಜೂ.16- ಕರ್ನಾಟಕ ರಾಜ್ಯ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ಜೂನ್ 30ರಂದು ನಿವೃತ್ತರಾಗುತ್ತಿದ್ದಾರೆ, ಅವರ ಸ್ಥಾನಕ್ಕೆ ಯಾರನ್ನು ನೇಮಕ ಮಾಡಲಾಗುವುದು ಎನ್ನುವ ಕುರಿತಂತೆ ಈಗಾಗಲೇ ಊಹಾಪೆÇೀಹಗಳು ಪ್ರಾರಂಭವಾಗಿದೆ.

ಮಾರ್ಚ್ ನಲ್ಲಿಯೇ ನಿವೃತ್ತರಾಗಬೇಕಾಗಿದ್ದ ಅಧಿಕಾರಿ ರತ್ನಪ್ರಭಾ ಅವರ ಸೇವಾವಧಿಯನ್ನು ಮೂರು ತಿಂಗಳು ವಿಸ್ತರಣೆ ಮಾಡಲಾಗಿತ್ತು.
ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಟಿ.ಎಂ.ವಿಜಯ್ ಭಾಸ್ಕರ್ ಮುಂದಿನ ಮುಖ್ಯ ಕಾರ್ಯದರ್ಶಿಯಾಗಿ ನೇಮಕವಾಗುವ ಎಲ್ಲಾ ಸಾಧ್ಯತೆಯನ್ನು ನಿರೀಕ್ಷಿಸಲಾಗುತ್ತಿದೆ. ಈ ನಡುವೆ ಕೃಷಿ ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆಯ ಕಾರ್ಯದರ್ಶಿಯಾಗಿ ಪ್ರಸ್ತುತ ಕೇಂದ್ರ ಸರ್ಕಾರದ ಸೇವೆಯಲ್ಲಿರುವ ಎಸ್.ಕೆ.ಪಟ್ನಾಯಕ್ ಸಹ ಕಾರ್ಯದರ್ಶಿ ಹುದ್ದೆಯ ಸ್ಪರ್ಧೆಯಲ್ಲಿದ್ದಾರೆ.

2022 ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ನರೇಂದ್ರ ಮೋದಿ ಸರ್ಕಾರದ ಯೋಜನೆಯಲ್ಲಿ ಇವರು ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ.
1982 ರ ಬ್ಯಾಚ್ ಐಎಎಸ್ ಅಧಿಕಾರಿಯಾಗಿರುವ ಪಟ್ನಾಯಕ್ 1983 ಐಎಎಸ್ ಬ್ಯಾಚ್ ನ ಭಾಸ್ಕರ್ ಅವರಿಗಿಂತ ಹಿರಿಯರಿದ್ದಾರೆ. ರಾಜ್ಯಾಡಳಿತದ ಸಂಬಂಧ ಹೆಚ್ಚು ಅನುಭವ ಹೊಂದಿರುವ ಪಟ್ನಾಯಕ್ ಹುದ್ದೆಗೆ ನೇಮಕವಾಗುವವರಲ್ಲಿ ಮುಂಚೂಣಿ ಅಭ್ಯರ್ಥಿ ಎನ್ನಲಾಗಿದೆ.
ಆದರೆ ವಿಜಯ್ ಭಾಸ್ಕರ್ ಕರ್ನಾಟಕದವರೇ ಆಗಿರುವುದು ಅವರು ರಾಜ್ಯದ ಮುಖ್ಯ ಕಾರ್ಯದರ್ಶಿ ಹುದ್ದೆಗೇರಲು ಅರ್ಹತೆ ಹೊಂದಿದ್ದಾರೆ ಎಂದು ಪಟ್ನಾಯಕ್ ಮೂಲತಃ ಒಡಿಶಾದವರೆನ್ನುವುದು ಇಲ್ಲಿ ಗಮನಾರ್ಹ ಅಂಶ.

ಹೀಗಿದ್ದರೂ ಪಟ್ಟನಾಯಕ್ ಕರ್ನಾಟಕದಲ್ಲಿ ಸೇವೆ ಮಾಡಲು ಬಯಸಿದರೆ ಮುಖ್ಯಮಂತ್ರಿ ಕುಮಾರಸ್ವಾಮಿ ಭಾಸ್ಕರ್ ಹೊರತಾಗಿ ಅವರಿಗೇ ಆದ್ಯತೆ ನೀಡುವ ಸಾಧ್ಯತೆಯೂ ಇದೆ. ಆದರೆ ಮೂಲಗಳು ಅದನ್ನು ತಳ್ಳಿ ಹಾಕಿವೆ. ಏಕೆಂದರೆ ಒಂದು ವೇಳೆ ಪಟ್ಟನಾಯಕ್ ರಾಜ್ಯ ಮುಖ್ಯ ಕಾರ್ಯದರ್ಶಿ ಆಗಿ ನೇಮಕವಾದಲ್ಲಿ ಅವರ ಅಧಿಕಾರಾವಧಿ ಕೇವಲ ಮೂರು ತಿಂಗಳಿಗೆ ಸೀಮಿತವಾಗಲಿದೆ. ಅವರು ಸೆಪ್ಟೆಂಬರ್ 30 ರಂದು ನಿವೃತ್ತರಾಗುವವರಿದ್ದಾರೆ.

ಇದೇ ವೇಳೆ ಭಾಸ್ಕರ್ ಅವರ ಸೇವಾವಧಿ ಇನ್ನೂ ಎರಡೂ ವರೆ ವರ್ಷಗಳಷ್ಟು ಸುದೀರ್ಘವಾಗಿದೆ. ಹೀಗಾಗಿ ಅವರೇನಾದರೂ ಆಡಳಿತದ ಮುಖ್ಯ ಹುದ್ದೆಗೇರಿದರೆ ಅವರು ಡಿಸೆಂಬರ್ 31, 2020 ರ ವರೆಗೆ ಅಧಿಕಾರದಲ್ಲಿ ಮುಂದುವರಿಯಬಹುದು ಎನ್ನುವ ಲೆಕ್ಕಾಚಾರವಿದೆ.
ಏತನ್ಮಧ್ಯೆ 1984 ರ ಬ್ಯಾಚ್ ನ ಐಎ ಎಸ್ ಅಧಿಕಾರಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತ ಡಿವಿ ಪ್ರಸಾದ್ ಹೆಸರು ಸಹ ಗಣನೆಗೆ ಬರುತ್ತಿದೆ ಎನ್ನುವುದು ವಿಶೇಷ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ