ಪಾಕಿಸ್ಥಾನ ಸೇನಾ ಪಡೆಗಳು ಮತ್ತೆ ಕದನ ವಿರಾಮ ಉಲ್ಲಂಘಿಸಿ ದಾಳಿ

ಜಮ್ಮು, ಜೂ.16- ಪಾಕಿಸ್ಥಾನ ಸೇನಾ ಪಡೆಗಳು ಮತ್ತೆ ಕದನ ವಿರಾಮ ಉಲ್ಲಂಘಿಸಿ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಇಂದು ಸೇನಾ ಯೋಧರೊಬ್ಬರು ಹುತಾತ್ಮರಾಗಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆ(ಎಲ್‍ಒಸಿ)ಯಲ್ಲಿ ಪಹರೆಯಲ್ಲಿ ಯೋಧರನ್ನು ಗುರಿಯಾಗಿಟ್ಟುಕೊಂಡು ಪಾಕ್ ರೇಂಜರ್‍ಗಳು ಗುಂಡಿನ ದಾಳಿ ನಡೆಸಿದರು.
ಈ ದಾಳಿಯಲ್ಲಿ ರೈಫಲ್‍ಮ್ಯಾನ್ ಬಿಕಾಸ್ ಗುರುಂಗ್ ಹುತಾತ್ಮರಾದರು.
ಜೂನ್ 13ರಂದು ಸಾಂಬಾ ವಲಯದಲ್ಲಿ ಪಾಕ್ ನಡೆಸಿದ ಅಪ್ರಚೋದಿತ ದಾಳಿಯಲ್ಲಿ ಓರ್ವ ಅಧಿಕಾರಿ ಸೇರಿದಂತೆ ನಾಲ್ವರು ಬಿಎಸ್‍ಎಫ್ ಯೋಧರು ವೀರ ಮರಣ ಹೊಂದಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ