ನವದೆಹಲಿ, ಜೂ.16-ಅತಿದೊಡ್ಡ ಅರ್ಥಿಕ ಅಪರಾಧಗಳನ್ನು ಎಸಗಿ ದೇಶದಿಂದ ಪರಾರಿಯಾಗಿರುವ ವಜ್ರ ವ್ಯಾಪಾರಿ ನೀರವ್ ಮೋದಿ ಹಲವು ಪಾಸ್‍ಪೆÇೀರ್ಟ್‍ಗಳ ಸಹಾಯದಿಂದ ವಿವಿಧ ದೇಶಗಳಲ್ಲಿ ಸುತ್ತುತ್ತಿರುವುದು ಆತನನ್ನು ಪತ್ತೆ ಮಾಡಲು ತನಿಖಾ ಸಂಸ್ಥೆಗಳಿಗೆ ಅಡಚಣೆಯಾಗಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ(ಪಿಎನ್‍ಬಿ) 13,000 ಕೋಟಿ ರೂ.ಗಳನ್ನು ವಂಚಿಸಿದ ಪ್ರಕರಣದ ಪ್ರಮುಖ ಆರೋಪಿ ಹಾಗೂ ಕಳಂಕಿತ ಉದ್ಯಮಿ ನೀರವ್ ಬಳಿ ಹಲವು ಪಾಸ್‍ಪೆÇೀರ್ಟ್‍ಗಳಿದ್ದು, ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಸುಲಭವಾಗಿ ಹಾರಲು ಸಹಾಯವಾಗಿದೆ.
ಈ ಪ್ರಕರಣದ ವಿಚಾರಣೆ ತನಿಖೆ ತೀವ್ರಗೊಳಿಸಿರುವ ಸಿಬಿಐ, ನೀರವ ಮೋದಿ ಬಗ್ಗೆ ಮಹತ್ವದ ಮಾಹಿತಿಗಳನ್ನು ಕಲೆ ಹಾಇದೆ. ಕಳೆದ ಮಾರ್ಚ್ 31ರವರೆಗೂ ಈ ವಂಚಕ ಬ್ರಿಟನ್‍ನಲ್ಲೇ (ಇಂಗ್ಲೆಂಡ್) ಇದ್ದ. ನಂತರ ಈತ ಇತರೆ ಪಾಸ್‍ಪೆÇೀರ್ಟ್ ಸಹಾಯದಿಂದ ಬೆಲ್ಜಿಯಂನ ಬ್ರುಸೆಲ್ಸ್‍ಗೆ ಪರಾರಿಯಾಗಿದ್ದ.
ಈತನ ಬಳಿ ಎನ್ ಸರಣಿಯ ಪಾಸ್‍ಪೆÇೀರ್ಟ್ ಇದೆ. ಅದರ ಸಹಾಯದಿಂದ ನಿರಾಂತಕವಾಗಿ ವಿವಿಧ ದೇಶಗಳಲ್ಲಿ ಸುತ್ತಾಡುತ್ತಿದ್ದಾನೆ. ನೀರವ್ ಝೆಡ್ ಶ್ರೇಣಿಯ ರಹದಾರಿ ಪತ್ರವನ್ನೂ ಸಹ ಹೊಂದಿದ್ದಾನೆ. ಆತನಲ್ಲಿ ಐದು ಪಾಸ್‍ಪೆÇೀರ್ಟ್‍ಗಳು ಹಾಘೂ ದೀರ್ಘಕಾಲದ ವಾಸ್ತವ್ಯ ವೀಸಾ ಸೌಲಭ್ಯ ಪಡೆದಿರುವುದು ಆತನ ಜಾಡು ಪತ್ತೆ ಮಾಡಲು ತೀವ್ರ ಅಡ್ಡಿಯಾಗಿದೆ.
ರೆಡ್ ಕಾರ್ನರ್ ನೋಟಿಸ್‍ಗೆ ಮನವಿ :
ಈ ಪ್ರಕರಣದ ಸಂಬಂಧ ಸಿಬಿಐ ಅಧಿಕಾರಿಗಳು ಇಂಟರ್‍ಪೆÇಲ್ (ಅಂತಾರಾಷ್ಟ್ರೀಯ ಪೆÇಲೀಸ್) ಸಂಪರ್ಕ ಮುಂದುವರಿಸಿದ್ದು, ನೀರವ್ ಕುಟುಂಬದ ಸದಸ್ಯರ ವಿರುದ್ಧ ರೆಡ್ ಕಾರ್ನರ್ ನೋಟಿಸ್ ನೀಡುವಂತೆ ಮನವಿ ಮಾಡಿದ್ದಾರೆ. ನೀರವ್ ಮೋದಿ, ಆತನ ಸಹೋದರ ನಿಶಾಲ್ ಮೋದಿ(ಬೆಲ್ಜಿಯಂ ಪೌರ), ಸಹೋದರ ಮಾನ ಮೆಹುಲ್ ಚೋಕ್ಸಿ, ಸುಭಾಷ್ ಪರಬ್ ಇವರ ವಿರುದ್ಧ ನೋಟಿಸ್‍ಗಳನ್ನು ಜಾರಿಗೊಳಿಸಿದರೆ ಬಂಧನ ಸುಲಭವಾಗುತ್ತದೆ ಎಂಬುದು ಸಿಬಿಐನ ಕಾರ್ಯತಂತ್ರ.