
ನವದೆಹಲಿ, ಜೂ.16-ಈದ್-ಉಲ್-ಫಿತರ್ ಪ್ರಯುಕ್ತ ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದ ಮುಸ್ಲಿಂ ಬಾಂಧವರಿಗೆ ಶುಭಾ ಕೋರಿದ್ದಾರೆ. ರಂಜಾನ್ ಹಬ್ಬವು ದೇಶದಲ್ಲಿ ಸೌಹಾರ್ದತೆಯ ಬೆಸುಗೆ ಬೆಸೆಯಲಿ ಎಂದು ಅವರು ಹಾರೈಸಿದ್ದಾರೆ. ಈದ್ ಮುಬಾರಕ್! ನಮ್ಮ ಸಮಾಜದಲ್ಲಿ ಏಕತೆ ಮತ್ತು ಸೌಹಾರ್ದತೆಯನ್ನು ಈ ಆಚರಣೆ ಮತ್ತಷ್ಟು ಸದೃಢಗೊಳಿಸಲಿ ಎಂದು ಅವರು ಟ್ವಿಟರ್ನಲ್ಲಿ ಹೇಳಿದ್ದಾರೆ.