ಬೆಂಗಳೂರು,ಜೂ.16-ಹಿರಿಯ ಪತ್ರಕರ್ತೆ ಹಾಗೂ ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆಗೈಯ್ಯಲು ಆರೋಪಿಗಳು ಅಮ್ಮಾ ಆಪರೇಷನ್ ಎಂಬ ಹೆಸರನಡಿ ಕಾರ್ಯಾಚರಣೆ ನಡೆಸಿರುವುದನ್ನು ವಿಶೇಷ ತನಿಖಾ ದಳ(ಎಸ್‍ಐಟಿ)ಪತ್ತೆಹಚ್ಚಿದೆ.
ಗೌರಿಯನ್ನು ಹತ್ಯೆ ಮಾಡಲು ಗುಪ್ತವಾದ ಸಂಕೇತದ ಮೂಲಕ ಕನ್ನಡ, ಮರಾಠಿ, ಹಿಂದಿ , ತೆಲುಗು ಭಾಷೆಗಳಲ್ಲಿ ಆರೋಪಿಗಳು ಮಾತನಾಡಿ ಕೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ.
ಸುಮಾರು ಒಂದು ವರ್ಷಗಳ ಕಾಲ ಕಾಯಿನ್ ಬೂತ್‍ಗಳಲ್ಲಿ ಮಾತನಾಡಿಕೊಳ್ಳುತ್ತಿದ್ದ ಇವರು, ತಮ್ಮ ಸಂಭಾಷಣೆಯಲ್ಲಿ ಅಪ್ಪಿತಪ್ಪಿಯೂ ಕೊಲೆ ಮಾಡಬೇಕಾದ ವ್ಯಕ್ತಿಯ ಹೆಸರನ್ನು ಬಾಯ್ಬಿಟ್ಟಿರಲಿಲ್ಲ. ಕೇವಲ ಗುಪ್ತ ಸಂಕೇತಗಳು ಹಾಗೂ ಅಮ್ಮ ಆಪರೇಷನ್ ಎಂದಷ್ಟೇ ಮಾತನಾಡುತ್ತಿದ್ದರು ಎಂದು ಉನ್ನತ ಮೂಲಗಳು ತಿಳಿಸಿವೆ.
ಸುಮಾರು 9 ತಿಂಗಳ ನಂತರ ಈ ಪ್ರಕರಣವನ್ನು ಬೇýಸಿರುವ ಎಸ್‍ಐಟಿ ಅýಕಾರಿಗಳು ಕೊನೆಗೂ ಪ್ರಮುಖ ಆರೋಪಿಗಳನ್ನು ಬಂýಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಿಜಾಪುರ ಜಿಲ್ಲೆಯ ಸಿಂಧಗಿ ತಾಲ್ಲೂಕಿನ ಪರಶುರಾಮ್ ವಾಘ್ಮೋರೆ ಈ ಪ್ರಕರಣದ ಪ್ರಮುಖ ರೂವಾರಿಯಾಗಿದ್ದಾನೆ.ಉಳಿದಂತೆ ಇತರೆ ಮೂವರು ಆರೋಪಿಗಳು ಈ ಕೊಲೆಗೆ ಸಂಚು ರೂಪಿಸಿರುವುದು ಈ ತನಿಖೆಯಿಂದ ಸಾಬೀತಾಗಿದೆ.