ಬೆಂಗಳೂರು, ಜೂ.16- ಚಿಕ್ಕ ಮಕ್ಕಳಿಗೆ ಹೆಚ್ಚುವರಿ ಹೊರೆಯಾಗದ ಹಾಗೆ ರಾಜ್ಯದ ಶಾಲೆಗಳ 1, 2ನೇ ತರಗತಿಯ ಮಕ್ಕಳಿಗೆ ಮನೆಗೆಲಸ (ಹೋಮ್ ವರ್ಕ್) ನೀಡುವುದನ್ನು ಶೀಘ್ರದಲ್ಲಿ ನಿಲ್ಲಿಸಲಾಗುವುದು ಮದ್ರಾಸ್ ಹೈಕೋರ್ಟ್ ಆದೇಶದ ಜತೆ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಹೇಳಿಕೆಯನ್ನು ಆಧರಿಸಿ ರಾಜ್ಯದ ಪ್ರಾಥಮಿಕ ಹಾಗೂ ಮಾದ್ಯಮಿಕ ಶಿಕ್ಷಣ ಇಲಾಖೆ ಹೊಸ ನಿಯಮವನ್ನು ಜಾರಿಗೆ ತರುವ ಸಂಬಂಧ ಚಿಂತನೆಯಲ್ಲಿದೆ.
ಇಲಾಖೆಯ ಮೂಲಗಳ ಪ್ರಕಾರ ಈ ಸಂಬಂಧ ಚರ್ಚೆಗಳು ನಡೆಯುತ್ತಿದ್ದು, 1 ಮತ್ತು 2ನೇ ತರಗತಿ ವಿದ್ಯಾರ್ಥಿಗಳಿಗೆ ಹೋಂ ವರ್ಕ್ ನಿಷೇಧಿಸುವ ಅಧಿಕೃತ ಅಧಿಸೂಚನೆಯನ್ನು ಕೆಲವು ದಿನಗಳಲ್ಲಿ ನೀಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸಧ್ಯ ರಾಜ್ಯದಲ್ಲಿ ಹೋಂ ವರ್ಕ್ ನಿಷೇಧಿಸುವ ಕ್ರಮ ಜಾರಿಯಲ್ಲಿಲ್ಲ. ಮಕ್ಕಳ ಒಳಿತಿಗಾಗಿ ಈ ನೀತಿಯನ್ನು ಜಾರಿಗೆ ತರುವುದಕ್ಕೆ ಸರ್ಕಾರ ಚಿಂತನೆ ನಡೆಸಿದೆ.ಇಲ್ಲಿ ಕೇವಲ ಹೋಮ್ ವರ್ಕ್ ಸಮಸ್ಯೆಯಲ್ಲ, ಗಮನಿಸಬೇಕಾದ ಬಹಳಷ್ಟು ಸಮಸ್ಯೆಗಳಿವೆ. ಇಲಾಖೆ ನೀತಿಯೊಂದನ್ನು ರಚಿಸಲು ಮುಂದಾಗಿದೆ. ಶಿಕ್ಷಣ ಮಂತ್ರಿಗಳು ಉಸ್ತುವಾರಿ ವಹಿಸಿಕೊಂಡಾಗ ನಾವು ಅದನ್ನು ಮೊದಲು ಅವರ ಮುಂದಿಡುತ್ತೇವೆ, ನಂತರ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ
ಶಾಲೆಗಳು ಮಕ್ಕಳಿಗೆ ಸಂತೋಷದಾಯಕ ಸ್ಥಳವಾಗಿರಬೇಕು. ಆದರೆ ಇಂದು ಬಹುತೇಕ ಶಾಲೆಗಳಲ್ಲಿ ಒಂದು ಎರಡನೇ ತರಗತಿ ಮಕ್ಕಳಿಗೂ ಹೋಂ ವರ್ಕ್ ನೀಡಲಾಗುತ್ತಿದೆ. ಇದರ ನಿಷೇಧಕ್ಕೆ ಇಲಾಖೆ ಸ್ಪಷ್ಟ ನಿರ್ಧಾರಕ್ಕೆ ಬರಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ರಾಜ್ಯದ ಒಂದು ಎರಡನೇ ತರಗತಿ ಮಕ್ಕಳಿಗೆ ಹೋಂ ವರ್ಕ್ ನಿಷೇಧವಾಗಬೇಕು ಎನ್ನುವುದು ದೀರ್ಘಾವಧಿ ಬೇಡಿಕೆಯಾಗಿದೆ. ಪೆÇ್ರಫೆಶನಲ್ ಯಶ್ ಪಾಲ್ ಸಮಿತಿಯು ಆರಂಭಿಕ ಹಂತದಲ್ಲಿ ಶಾಲಾ ಮಕ್ಕಳ ಮೇಲೆ ದೈಹಿಕ ಮತ್ತು ಶೈಕ್ಷಣಿಕ ಹೊರೆಗಳನ್ನು ತಗ್ಗಿಸಲು ಹಲವಾರು ಶಿಫಾರಸುಗಳನ್ನು ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಇದರಲ್ಲಿ ಶಾಲಾ ಬ್ಯಾಗ್ ಗಳ ತೂಕ ಇಳಿಸುವುದು, ಹೋಂ ವರ್ಕ್ ಕಡಿತವೂ ಸೇರಿತ್ತು.