ಸೇಂಟ್ ಪೀಟರ್ಸ್‍ಬರ್ಗ್, ಜೂ.16-ರಷ್ಯಾದಲ್ಲಿ ನಡೆಯುತ್ತಿರುವ ಫಿಫಾ ಪುಟ್ಬಾಲ್ ಮಹಾಸಮರದಲ್ಲಿ ಇರಾನ್ ಮೊರೊಕ್ಕೊ ವಿರುದ್ದ 1-0 ಗೋಲುಗಳಿಂದ ಗೆಲುವು ಸಾಧಿಸಿದೆ.
ಸೇಂಟ್ ಪೀಟರ್ಸ್‍ಬರ್ಗ್‍ನ ಕ್ರೆಸ್ಟೋವ್‍ಸ್ಕಿ ಕ್ರೀಡಾಂಗಣದಲ್ಲಿ ನಡೆದ ಬಿ ಗುಂಪಿನ ಪೈಪೆÇೀಟಿಯಲ್ಲಿ ಇರಾನ್ ತಂಡ ಮೊರೊಕ್ಕೊವನ್ನು ಮಣಿಸುವ ಮೂಲಕ ಶುಭಾರಂಭ ಮಾಡಿತು.
ಉಭಯ ತಂಡಗಳು ವಿಶ್ವಕಪ್‍ನಲ್ಲಿ ಮುಖಾಮುಖಿಯಾಗಿದ್ದು ಇದೇ ಮೊದಲು. 90 ನಿಮಿಷಗಳ ರೋಚಕ ಹಣಾಹಣಿಯಲ್ಲಿ ಇರಾನ್ ಮತ್ತು ಮೊರೊಕ್ಕೋ ತಂಡಗಳು ಯಾವುದೇ ಗೋಲು ದಾಖಲಸಿಲಿಲ್ಲ. ಆದರೆ ಹೆಚ್ಚುವರಿ ಸಮಯದಲ್ಲಿ ಇರಾನ್ ಗೋಲು ಬಾರಿಸಿ ವಿಜಯಿಯಾಯಿತು.
ಮಸೌದ್ ಶೋಜಾಯಿ ನೇತೃತ್ವದ ಇರಾನ್ ತಂಡ ವಿಶ್ವ ಕಪ್‍ನಲ್ಲಿ ಒಮ್ಮೆಯೂ ನಾಕ್-ಔಟ್ ಹಂತ ಪ್ರವೇಶಿಸಿಲ್ಲ. ಟೂರ್ನಿಯಲ್ಲಿ ಒಟ್ಟು 12 ಪಂದ್ಯಗಳನ್ನು ಆಡಲಿರುವ ತಂಡ ಒಂದರಲ್ಲಿ ಗೆದ್ದಿದೆ. 1998ರ ವಿಶ್ವಕಪ್ ಫುಟ್ಬಾಲ್‍ನಲ್ಲಿ ಇರಾನ್ 2-1 ಗೋಲುಗಳಿಂದ ಅಮರಿಕವನ್ನು ಮಣಿಸಿತ್ತು.