ಬೆಂಗಳೂರು, ಜೂ.16-ಮನೆ ಮಾಲೀಕರು ಕಾರ್ಯ ನಿಮಿತ್ತ ಹೊರಗೆ ಹೋಗಿದ್ದಾಗ ಮನೆಯಲ್ಲಿದ್ದ ಒಂದು ಲಕ್ಷ ರೂ. ಕಳ್ಳತನವಾಗಿರುವ ಘಟನೆ ವಿಜಯನಗರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಸಿದ್ದಿವಿನಾಯಕ ರಸ್ತೆಯ ಸುಬಣ್ಣ ಗಾರ್ಡನ್, 2ನೇ ಮುಖ್ಯರಸ್ತೆ, ಮನೋಹರ ಅಪಾರ್ಟ್‍ಮೆಂಟ್ ಮುಂಭಾಗದ ನಿವಾಸಿ ಬ್ರಹ್ಮಲಿಂಗೇಶ್ವರ ಎಂಬುವರ ಮನೆಯಲ್ಲಿ ಹಣ ಕಳ್ಳತನವಾಗಿದೆ.
ಮೂರು ದಿನಗಳ ಹಿಂದೆ ಇವರು ಹೊರಗೆ ಹೋಗಿದ್ದಾಗ ಮನೆಯಲ್ಲಿದ್ದ ಒಂದು ಲಕ್ಷ ರೂ. ಹಣ ಕಳ್ಳತನವಾಗಿದೆ. ಆದರೆ, ಇದು ಬ್ರಹ್ಮಲಿಂಗೇಶ್ವರ ಅವರ ಗಮನಕ್ಕೆ ಬಂದಿಲ್ಲ.
ನಿನ್ನೆ ಬೀರು ತೆಗೆದು ನೋಡಿದಾಗ ಒಂದು ಲಕ್ಷ ಹಣ ನಾಪತ್ತೆಯಾಗಿರುವುದು ಗಮನಕ್ಕೆ ಬಂದು ತಕ್ಷಣ ಪೆÇಲೀಸರಿಗೆ ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ವಿಜಯನಗರ ಠಾಣೆ ಪೆÇಲೀಸರು ತನಿಖೆ ಕೈಗೊಂಡಿದ್ದಾರೆ.