ಯುವತಿಯಿಂದ ಚೈನ್ ಮತ್ತು ಐಫೆÇೀನ್‍ನ್ನು ಕಳ್ಳತನ ಮಾಡಿದ್ದ ಇಬ್ಬರನ್ನು ಪಶ್ಚಿಮ ಠಾಣೆ ಪೆÇಲೀಸರ ವಶಕ್ಕೆ

 

ಮಂಡ್ಯ,ಜೂ.16- ಯುವತಿಯಿಂದ ಚೈನ್ ಮತ್ತು ಐಫೆÇೀನ್‍ನ್ನು ಕಳ್ಳತನ ಮಾಡಿದ್ದ ಇಬ್ಬರನ್ನು ಪಶ್ಚಿಮ ಠಾಣೆ ಪೆÇಲೀಸರು ಬಂಧಿಸಿದ್ದಾರೆ.
ಜಿಲ್ಲೆಯ ಗೌತಮ್ ಬಡಾವಣೆಯ ನಿವಾಸಿ ಕುಮಾರ್, ವಿ.ವಿ.ಲೇಔಟ್‍ನ ವೀರಸನತ್ ಬಂಧಿತ ಆರೋಪಿಗಳು.
ಕಳೆದ 11ರಂದು ಸುಭಾಷ್‍ನಗರದ 5ನೇ ಕ್ರಾಸ್‍ನಲ್ಲಿ ಶೃತಿ ಎಂಬುವರು ನಡೆದು ಹೋಗುತ್ತಿದ್ದ ವೇಳೆ ಇವರನ್ನು ಬೈಕ್‍ನಲ್ಲಿ ಹಿಂಬಾಲಿಸಿದ ಈ ಇಬ್ಬರು ಆಕೆಯ ಬಳಿ ಇದ್ದ ಫೆÇೀನ್ ಹಾಗೂ ಚಿನ್ನದ ಸರವನ್ನು ಕಿತ್ತು ಪರಾರಿಯಾಗಿದ್ದರು.
ಈ ಬಗ್ಗೆ ಶೃತಿ ಅವರು ಪಶ್ಚಿಮ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೆÇಲೀಸರು ಕಾರ್ಯಾರಚಣೆ ನಡೆಸಿ ಈ ಇಬ್ಬರನ್ನು ಬಂಧಿಸಿ ಮೊಬೈಲ್ ಹಾಗೂ ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದಾರೆ.
ಸಿಪಿಐ ರವಿ, ಪಿಎಸ್‍ಐ ಅನಂತಕುಮಾರ್ ಕಾರ್ಯಚರಣೆಯಲ್ಲಿ ಕೈಗೊಂಡಿದ್ದರು. ಪಶ್ಚಿಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ