
ಬೆಂಗಳೂರು, ಜೂ.15-ಕಾಮಾಕ್ಷಿಪಾಳ್ಯ ಪೆÇಲೀಸ್ ಠಾಣೆ ವ್ಯಾಪ್ತಿಯ ಮನೆಯೊಂದರ ಮೇಲೆ ದಾಳಿ ಮಾಡಿದ ಸಿಸಿಬಿ ಪೆÇಲೀಸರು ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದ ಆರು ಮಂದಿಯನ್ನು ಬಂಧಿಸಿ, 2.60 ಲಕ್ಷ ರೂ.ಗಳ ನಗದು ವಶಪಡಿಸಿಕೊಂಡಿದ್ದಾರೆ.
ಯೂನಸ್(45), ಅರ್ಷದ್(44), ಅರುಣ್‍ಕುಮಾರ್(41), ಶೇಖರ್(47), ಚೇತನ್(34) ಹಾಗೂ ಪುನೀತ್‍ಕುಮಾರ್(28) ಬಂಧಿತ ಆರೋಪಿಗಳು ಈ ಆರೋಪಿಗಳು ಪಣಕ್ಕಿಟ್ಟಿದ್ದ 2,60,000 ರೂ.ಗಳು ಹಾಗೂ 52 ಇಸ್ಪೀಟ್ ಎಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಾಮಾಕ್ಷಿಪಾಳ್ಯ ಪೆÇಲೀಸ್ ಠಾಣೆ ಸರಹದ್ದಿನ ಪ್ರೇಮನಗರ ರಿಂಗ್‍ರಸ್ತೆಯ 3ನೇ ಮುಖ್ಯ ರಸ್ತೆ, 3ನೇ ಅಡ್ಡರಸ್ತೆಯ ಮನೆಯೊಂದರಲ್ಲಿ ಅಂದರ್-ಬಾಹರ್ ಅದೃಷ್ಟದ ಜೂಜಾಟ ನಡೆಯುತ್ತಿದೆ ಎಂಬ ಖಚಿತ ವರ್ತಮಾನ ಸಿಸಿಬಿ ಪೆÇಲೀಸರಿಗೆ ಲಭಿಸಿತು.
ಸಿಸಿಬಿ ವಿಚಾರಣಾ ದಳದ ಎಸಿಪಿ ಪಿ.ಟಿ.ಸುಬ್ರಹ್ಮಣ್ಯ ಅವರ ಮಾರ್ಗದರ್ಶನದಲ್ಲಿ ಇನ್ಸ್‍ಪೆಕ್ಟರ್ ಎಸ್.ಡಿ.ಶಶಿಧರ್ ಮತ್ತು ಸಿಬ್ಬಂದಿ ಜೂಜು ಅಡ್ಡೆ ಮೇಲೆ ದಾಳಿ ನಡೆಸಿ ಆರು ಜನರನ್ನು ಬಂಧಿಸಿ ಪಣದ ಹಣ ವಶಪಡಿಸಿಕೊಂಡಿದ್ಧಾರೆ ಎಂದು ಸಿಸಿಬಿ ಪ್ರಕಟಣೆ ತಿಳಿಸಿದೆ.