
ಬೆಂಗಳೂರು: ಪವರ್ ಫುಲ್ ನಾಯಕ ಜಲಸಂಪನ್ಮೂಲ ಮತ್ತು ವೈದ್ಯಕೀಯ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಕಾಡುಸಿದ್ದೇಶ್ವರ ಮಠದ ಶಿವಯೋಗಿ ಸ್ವಾಮೀಜಿ ಸಲಹೆ ನೀಡಿದ್ದಾರೆ.
ಡಿ.ಕೆ ಶಿವಕುಮಾರ್ ಮಠದ ಮಗನಾಗಿ ಬೆಳೆದಿದ್ದಾರೆ. ಅವರು ಇಂತಹದ್ದೇ ಖಾತೆ ಬೇಕು ಎಂದು ಅಪೇಕ್ಷೆಪಡುವುದು ಬೇಡ. ಇರೋ ಸ್ಥಾನದಲ್ಲೇ ಅವರು ಸಾಧನೆ ಮಾಡಲಿ. ಹೀಗಾಗಿ ಸಿಕ್ಕಿರುವ ಸ್ಥಾನದಲ್ಲಿದ್ದು, ಕಾಯಕವೇ ಕೈಲಾಸವೆಂದು ಕೆಲಸ ಮಾಡಲಿ. ಮುಂದೊಂದು ದಿನ ಅವರು ಉನ್ನತ ಸ್ಥಾನಕ್ಕೆ ತಲುಪುತ್ತಾರೆ ಎಂದು ಶಿವಯೋಗಿ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ತಿಪಟೂರು ತಾಲೂಕಿನ ನೊಣವಿನಕೆರೆಯ ಕಾಡುಸಿದ್ದೇಶ್ವರ ಸಚಿವ ಡಿಕೆಶಿ ಅವರ ಆರಾಧ್ಯ ದೈವವಾಗಿದೆ. ಹೀಗಾಗಿ ಶ್ರೀಗಳ ಆಶೀರ್ವಾದ ಪಡೆದೇ ಡಿಕೆಶಿ ಶುಭಕಾರ್ಯ ಕೈಗೊಳ್ಳುತ್ತಾರೆ. ಅಲ್ಲದೇ ಮಠಕ್ಕೆ ಡಿಕೆಶಿ ಭೇಟಿ ನೀಡಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿದ್ದಾರೆ.