
ಸಿಲಿಗುರಿ:ಜೂ-15: ದೇಶದೆಲ್ಲೆಡೆ ರಂಜಾನ್ ಆಚರಣೆಯ ಸಂಭ್ರಮ ಮನೆಮಾಡಿದ್ದು, ಗಡಿಯಲ್ಲಿ ಯೋಧರು ಪರಸ್ಪರ ಸಿಹಿ ವಿನಿಮಯ ಮಾಡಿಕೊಂಡಿದ್ದಾರೆ.
ಸಿಲಿಗುರಿಯಲ್ಲಿ ಗಡಿ ಭದ್ರತಾ ಪಡೆ(ಬಿಎಸ್ಎಫ್) ಮತ್ತು ಬಾಂಗ್ಲಾದೇಶ ಗಡಿ ರಕ್ಷಣಾ ಪಡೆ(ಬಿಬಿಜಿ) ಯೋಧರು ಶುಕ್ರವಾರ ಸಿಹಿ ವಿನಿಯಮ ಮಾಡಿಕೊಂಡು ಪರಸ್ಪರ ಅಭಿನಂದನೆ ಸಲ್ಲಿಸಿಸರು.
ಇತ್ತ ದೇಶದಲ್ಲಿ ಮುಸ್ಲಿಂ ಸಮಾಜದ ಜನರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಿದ್ದು, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ.
ಕೇರಳದ ತಿರುವನಂತಪುರದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯುತ್ತಿದೆ.