‘ಬಣ್ಣದಕೊಡೆ’ ಅನ್ನುವ ಕಲಾತ್ಮಕ ಚಿತ್ರದ ನಂತರ ನಿರ್ದೇಶಕ ಕೃಷ್ಣ ಬೆಳ್ತಂಗಡಿ ಕೈಗೆತ್ತಿಕೊಂಡಿರುವ ಎರಡನೇ ಚಿತ್ರ ‘ರಿಪ್ಪರ್’ ಮೊದಲ ಹಂತದ ಚಿತ್ರೀಕರಣವನ್ನು ಯಶಸ್ವಿಯಾಗಿ ಪೂರೈಸಿದೆ.
ಜಿ.ಕೆರಿಯಲ್ ಇಮೇಜಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ರಿಪ್ಪರ್ ಚಲನಚಿತ್ರವು, ಸತ್ಯ ಘಟನಾ ಆಧಾರಿತ ಚಿತ್ರವಾಗಿದ್ದು, ಈಗಿನ ಕಾಲಘಟ್ಟಕ್ಕೆ ಅನುಗುಣವಾಗಿ ತುಸು ಬದಲಾವಣೆಗಳೊಂದಿಗೆ ಚಿತ್ರೀಕರಿಸಲಾಗುತ್ತಿದೆ.
ಮೊದಲ ಹಂತದ ಹತ್ತು ದಿನಗಳ ಚಿತ್ರೀಕರಣವು ಆಗುಂಬೆ ಹಾಗೂ ಆಸುಪಾಸಿನಲ್ಲಿ ನಡೆಯಿತು.ಪೊಲೀಸರ ಕಸ್ಟಡಿಯಿಂದ ತಪ್ಪಿಸಿಕೊಂಡು ಹೋದ ಖಳನಾಯಕನನ್ನು ಪೊಲೀಸರು ಹುಡುಕಾಡುವುದು, ಖಳನಾಯಕನ ಪತ್ನಿಯ ರೋಷ, ನಾಯಕ ನಾಯಕಿಯ ಭಾವನಾತ್ಮಕ ಸನ್ನಿವೇಶಗಳ ದೃಶ್ಯಗಳನ್ನು ಚಿತ್ರೀಕರಿಸಲಾಯಿತು.
ಖಳನಾಯಕನ ದೃಶ್ಯ ಹೊರತುಪಡಸಿ, ಉಳಿದಂತೆ ಹಲವು ದೃಶ್ಯಗಳ ಚಿತ್ರೀಕರಣ ನಡೆಯಿತು. ಖಳನಾಯಕರ ಪತ್ನಿ ಪಾತ್ರದಲ್ಲಿಅಮುಲ್ ಗೌಡ, ಇನ್ಸ್ಪೆಕ್ಟರ್ ಪಾತ್ರದಲ್ಲಿಚಕ್ರವರ್ತಿ ಚಂದ್ರಚೂಡ್, ನಾಯಕ ಶ್ರೀರಾಮ್, ನಾಯಕಿ ಶ್ರೀಮಯ್ಯ ಇವರ ದೃಶ್ಯಗಳು ಚಿತ್ರೀಕರಣಗೊಂಡವು.
ಕೃಷ್ಣ ಬೆಳ್ತಂಗಡಿ ನಿರ್ದೇಶನಚಿತ್ರಕ್ಕಿದ್ದು, ಅನಿಲ್ ಕುಮಾರ್ ಛಾಯಾಗ್ರಹಣ, ಹಿತನ್ ಹಾಸನ್ ಸಂಗೀತ, ಶಕ್ತಿಪ್ರಸಾದ್, ಶ್ರೀದೇವಿ ಮಂಜುನಾಥ್ ಹಾಗೂ ಅರ್ಪಿತಾಇವರ ನಿರ್ದೇಶನ ಸಹಕಾರಚಿತ್ರಕ್ಕಿದೆ.
ಎರಡನೇ ಹಂತದಚಿತ್ರೀಕರಣ ಬೆಂಗಳೂರಲ್ಲಿ ಶೀಘ್ರ ನಡೆಯಲಿದೆಎಂದು ನಿರ್ದೇಶಕ ಕೃಷ್ಣ ಬೆಳ್ತಂಗಡಿ ತಿಳಿಸಿದ್ದಾರೆ.