
ಶ್ರೀಭದ್ರಾವತಿ ಮೂವೀ ಮೇಕರ್ಸ್ ಲಾಂಛನದಲ್ಲಿ ಕುಮಾರ್ ಎನ್ ಭದ್ರಾವತಿ ಅವರು ನಿರ್ಮಿಸುತ್ತಿರುವ, ಕೃಷ್ಣ ಎಲ್ ಹಾಗೂ ಮುನಿಸ್ವಾಮಿ ಎಸ್.ಡಿ ಅವರ ಸಹ ನಿರ್ಮಾಣವಿರುವ `ಮೂರ್ಕಲ್ ಎಸ್ಟೇಟ್` ಎಂಬ ಹಾರರ್ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು, ಮೈಸಚಿೂರು, ಚಿಕ್ಕಮಗಳೂರಿನಲ್ಲಿ ಚಿತ್ರಕ್ಕೆ 35ದಿನಗಳ ಚಿತ್ರೀಕರಣ ನಡೆದಿದೆ.
ಪ್ರಮೋದ್ ಕುಮಾರ್ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ರವಿಚಂದ್ರನ್ ಹಾಗೂ ಫಣೀಶ್ ಅವರ ಜೊತೆ ಕೆಲಸ ಮಾಡಿದ ಅನುಭವ ಪ್ರಮೋದ್ ಕುಮಾರ್ ಅವರಿಗಿದೆ. `ಲೂಸ್ ಕಲೆಕ್ಷನ್` ಖ್ಯಾತಿಯ ಸುದ್ದು ರಾಯ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ರಾಖಿ ಛಾಯಾಗ್ರಹಣ ಹಾಗೂ ಮರಿಸ್ವಾಮಿ ಅವರ ಸಂಕಲನ ಈ ಚಿತ್ರಕ್ಕಿದೆ. ಚಿತ್ರದ ವಿನೂತನ ಹಾಡುಗಳು ಹಾಗೂ ವಿಭಿನ್ನ ಟ್ರೇಲರ್ ಸದ್ಯದಲ್ಲೇ ಬಿಡುಗಡೆಯಾಗಲಿದೆ.
ಪ್ರವೀಣ್ ಅವರು ನಾಯಕನಾಗಿ ನಟಿಸುತ್ತಿರುವ ಈ ಚಿತ್ರದ ನಾಯಕಿಯಾಗಿ ಪ್ರಕೃತಿ(ಡೇಸ್ ಆಫ್ ಬೋರಾಪುರ) ಅಭಿನಯಿಸಿದ್ದಾರೆ.