ರಾಯ್‍ಪುರ್, ಜೂ.14-ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಛತ್ತೀಸ್‍ಗಢದ ನಯಾ ರಾಯ್‍ಪುರ್‍ನಲ್ಲಿ ಅತ್ಯಾಧುನಿಕ ಇಂಟಿಗ್ರೇಟೆಡ್ ಕಮಾಂಡ್ ಹಾಗೂ ನಿಯಂತ್ರಣ ಕೇಂದ್ರವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು.
ಛತ್ತೀಸ್‍ಗಢದ ನೂತನ ರಾಜಧಾನಿಯಾಗಿ ಹೊರಹೊಮ್ಮಲಿರುವ ನಯಾ ರಾಯ್‍ಪುರ್‍ನಲ್ಲಿ(ರಾಯ್‍ಪುರ್ ಈಗಿನ ರಾಜಧಾನಿ) ನಡೆದ ಕಾರ್ಯಕ್ರಮದಲ್ಲಿ ಮೋದಿ ಈ ನಿಯಂತ್ರಣ ಕೇಂದ್ರವನ್ನು ಉದ್ಘಾಟಿಸಿದರು.
ಈ ಕೇಂದ್ರವು ಒಂದೇ ವೇದಿಕೆಯಲ್ಲಿ ನೀರು ಮತ್ತು ವಿದ್ಯುತ್ ಪೂರೈಕೆ, ನೈರ್ಮಲೀಕರಣ, ಸಂಚಾರ ವ್ಯವಸ್ಥೆ, ಸಮಗ್ರ ಕಟ್ಟಡ ನಿರ್ವಹಣೆ, ನಗರ ಸಂಪರ್ಕ ಹಾಗೂ ಇಂಟರ್‍ನೆಟ್ ಮೂಲಸೌಕರ್ಯ(ಡೇಟಾ ಸೆಂಟರ್)-ಇವುಗಳನ್ನು ಆನ್‍ಲೈನ್ ಮೂಲಕ ನಿಯಂತ್ರಣ ಮತ್ತು ನಿರ್ವಹಣೆ ಮಾಡಲಿದೆ. ಅಲ್ಲದೇ ನಯಾ ರಾಯ್‍ಪುರ್ ನಗರದ ವಿವಿಧ ಸೌಲಭ್ಯಗಳ ಉಸ್ತುವಾರಿಯನ್ನೂ ವಹಿಸಲಿದೆ.
ಹೈಟೆಕ್ ಇಂಟಿಗ್ರೇಟೆಡ್ ಕಮಾಂಡ್ ಹಾಗೂ ನಿಯಂತ್ರಣ ಕೇಂದ್ರವನ್ನು ಜಿಐಎಸ್(ಭೌಗೋಳಿಕ ಮಾಹಿತಿ ವ್ಯವಸ್ಥೆ) ವೇದಿಕೆ ಮೂಲಕ ಕೇಂದ್ರವನ್ನು ನಿರ್ವಹಿಸಲಾಗುತ್ತದೆ.