ಉದ್ಯಮಿ ನೀರವ್ ಮೋದಿ ಲಂಡನ್‍ನಿಂದ ಬ್ರುಸೇಲ್ಸ್‍ಗೆ ಪರಾರಿ?

ಲಂಡನ್, ಜೂ.14- ಭಾರತದಲ್ಲಿ ಬ್ಯಾಂಕ್‍ಗಳಿಗೆ ಸಾವಿರಾರು ಕೋಟಿ ವಂಚನೆ ಮಾಡಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ವಜ್ರಾಭರಣಗಳ ಉದ್ಯಮಿ ನೀರವ್ ಮೋದಿ ಲಂಡನ್‍ನಿಂದ ಬ್ರುಸೇಲ್ಸ್‍ಗೆ ಪರಾರಿಯಾಗಲು ಮುಂದಾಗಿದ್ದಾನೆ.
ಲಂಡನ್‍ನಲ್ಲಿ ಸದ್ಯಕ್ಕೆ ರಾಜಕೀಯ ಆಶ್ರಯ ಪಡೆದಿರುವ ನೀರವ್ ಮೋದಿ ಇಲ್ಲಿದ್ದರೆ ತನಗೆ ಕಾನೂನಿನ ತೂಗುಗತ್ತಿ ಎದುರಾಗಬಹುದೆಂಬ ಭೀತಿ ಹಿನ್ನೆಲೆಯಲ್ಲಿ ಆತ ಬ್ರುಸೇಲ್ಸ್‍ಗೆ ತೆರಳಲು ಸಿದ್ಧತೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ. ಸದ್ಯಕ್ಕೆ ನೀರವ್ ಮೋದಿ ಸಿಂಗಾಪುರ್ ಪಾಸ್‍ಪೆÇೀರ್ಟ್ ಹೊಂದಿದ್ದಾನೆ. ಲಂಡನ್‍ನಿಂದ ಸಿಂಗಾಪುರ್‍ಗೆ ತೆರಳಿ ಅಲ್ಲಿಂದ ಬ್ರುಸೇಲ್ಸ್‍ಗೆ ಪರಾರಿಯಾಗಲು ಆತ ಸಜ್ಜಾಗಿದ್ದಾನೆ ಎಂದು ಟೈಮ್‍ಆಫ್ ಇಂಡಿಯಾ ವರದಿ ಮಾಡಿದೆ.
ನೀರವ್ ಮೋದಿ ಲಂಡನ್‍ನಿಂದ ಪರಾರಿಯಾಗುವ ಬಗ್ಗೆ ನಮಗೆ ಈವರೆಗೂ ಯಾವುದೇ ಖಚಿತ ಮಾಹಿತಿ ಲಭ್ಯವಾಗಿಲ್ಲ. ಆತ ಇಲ್ಲಿ ರಾಜಕೀಯ ಆಶ್ರಯ ಪಡೆದಿದ್ದಾನೆ ಎಂಬುದಕ್ಕೆ ನಮಗೆ ಬ್ರಿಟನ್ ಸರ್ಕಾರದಿಂದ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ ಎಂದು ಲಂಡನ್‍ನಲ್ಲಿರುವ ಭಾರತೀಯ ಹೈಕಮೀಷನರ್ ಸ್ಪಷ್ಟಪಡಿಸಿದ್ದಾರೆ.
ನೀರವ್ ಮೋದಿ ಲಂಡನ್‍ನಿಂದ ಪರಾರಿಯಾಗಲು ಪ್ರಮುಖ ಕಾರಣ ಎಂದರೆ ಸಿಬಿಐ ಮತ್ತು ಇಡಿ ಅಧಿಕಾರಿಗಳು ಆತನನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಇಂಟರ್‍ಪೆÇೀಲ್‍ಗೆ ಮನವಿ ಮಾಡಿದೆ.
ಅಲ್ಲದೆ ಭಾರತ ಮತ್ತು ಬ್ರಿಟನ್ ನಡುವೆ ಆರೋಪಿಗಳ ಹಸ್ತಾಂತರ ವಿನಿಮಯ ಒಪ್ಪಂದವಾಗಿರುವುದು ನೀರವ್ ಮೋದಿಯ ನಿದ್ದೆಗೆಡುವಂತೆ ಮಾಡಿದೆ.
ಒಂದು ವೇಳೆ ಲಂಡನ್‍ನಲ್ಲಿ ನಾನು ಬಂಧಿತನಾದರೆ ಇಲ್ಲಿನ ರಾಜ ತಾಂತ್ರಿಕ ಅಧಿಕಾರಿಗಳು ಬಂಧಿಸಿ ಭಾರತಕ್ಕೆ ಹಸ್ತಾಂತರ ಮಾಡಬಹುದೆಂಬ ಭೀತಿ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಬ್ರುಸೆಲ್‍ನಲ್ಲಿ ವಾಸ್ತವ್ಯ ಹೂಡಲು ಮುಂದಾಗಿದ್ದಾನೆ.
ಆದರೆ ಭಾರತದ ತನಿಖಾಧಿಕಾರಿಗಳು ಆತನನ್ನು ಲಂಡನ್‍ನಲ್ಲಿದ್ದಾಗಲೇ ಹಿಡಿದು ತರಲು ಈಗಾಗಲೇ ಕಾರ್ಯೋನ್ಮುಖರಾಗಿದ್ದಾರೆ. ದೇಶದ ಅತಿ ಎರಡನೇ ವಾಣಿಜ್ಯ ಬ್ಯಾಂಕ್ ಎನಿಸಿದ ಪಂಜಾಬ್ ಬ್ಯಾಂಕ್‍ನಲ್ಲಿ ಸುಮಾರು 13,600 ಕೋಟಿ ಸಾಲ ಪಡೆದು ನೀರವ್ ಮೋದಿ ವಿದೇಶಕ್ಕೆ ಪರಾರಿಯಾಗಿದ್ದಾನೆ.
ಈಗಾಗಲೇ ಸಿಬಿಐ, ಇಡಿ ಸೇರಿದಂತೆ ವಿವಿಧ ತನಿಖಾ ಸಂಸ್ಥೆಗಳು ಆತನನ್ನು ಬಂಧಿಸಲು ಬೆನ್ನುಬಿದ್ದಿವೆ. ಆತನ ಕುಟುಂಬಕ್ಕೆ ಸೇರಿದ ಎಲ್ಲ ಆಸ್ತಿಪಾಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ