ದೊಡ್ಡಬಳ್ಳಾಪುರ: ಇದೆ ತಿಂಗಳ ಜೂನ್ ಐದರಂದು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಿ ಪ್ಲಾಸ್ಟಿಕ್ ಮತು ಪ್ರಕೃತಿ ವಿಕೋಪಗಳಿಂದಾಗುವ ಅನಾಹುತಗಳ ಬಗ್ಗೆ ಕೆಲ ಪರಿಸರವಾದಿಗಳು ಚಿಂತಕರು ಜಾಗೃತಿ ಮೂಡಿಸಿದ್ದಾರೆ
ವಿಪರ್ಯಾಸವೆಂದರೆ ತಾಲ್ಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರ ಘಾಟಿ ಸುಬ್ರಹ್ಮಣ್ಯದಲ್ಲಿ ಮಾತ್ರ ಪ್ಲಾಸ್ಟಿಕ್ ನ ಕಸದ ರಾಶಿಗಳು ಎದ್ದು ಕಾಣುತ್ತಿವೆ
ಕಳೆದ ವರ್ಷವಷ್ಟೇ ಪ್ಲಾಸ್ಟಿಕ್ ಬಳಸದಂತೆ ಸ್ಥಳಿಯ ಅಂಗಡಿಗಳಿಗೆ ಕಲ್ಯಾಣ ಮಂಟಪಗಳ ಮಾಲಿಕರಿಗೆ ಆದೇಶಿಸಲಾಗಿತ್ತು ಆದರೆ ಕ್ಯಾರೇ ಎನ್ನದೆ ಕ್ಷೇತ್ರಕ್ಕೆ ಆಗಮಿಸುವ ಭಕ್ತರು ಸ್ಥಳಿಯ ಅಂಗಡಿಯವರು ಮತ್ತು ಕಲ್ಯಾಣ ಮಂಟಪದವರು ಮತ್ತೆ ಪ್ಲಾಸ್ಟಿಕ್ ಬಳಸುತ್ತಿದ್ದಾರೆ ಇದರಿಂದ ದೇವಾಲಯದ ಹಿಂಬಾಗದಲ್ಲಿ ಅಲ್ಲಲ್ಲಿ ಪ್ಲಾಸ್ಟಿಕ್ನ ರಾಶಿಗಳೂ ಬಿದ್ದಿವೆ ಈ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಾತನಾಡಿ ಕಳೆದ ವಾರವಷ್ಟೆ ಎಲ್ಲ ಅಂಗಡಿ ಗಳಿಗೂ ನೋಟೀಸ್ ನೀದಿದ್ದೆವೆ ಈಗಿರುವ ಕಸದ ರಾಶಿಯನ್ನು ಕೂಡಲೆ ತೆರವುಗೊಳಿಸುತ್ತೇವೆ ಹಾಗೂ ದೇವಾಲಯದ ಮುಖ್ಯದ್ವಾರದ ಸ್ವಾಗತ ಕಮಾನಿನ ಬಳಿ ಪ್ಲಾಸ್ಟಿಕ್ ಬಳಸದಂತೆ ಸೂಚನಾ ಫಲಕಗಳನ್ನು ಹಾಕುತ್ತೇವೆ ನಂತರ ಪ್ಲಾಸ್ಟಿಕ್ ಬಳಸಿದರೆ ಸೂಕ್ತ ಕ್ರಮ ಜರುಗಿಸುತ್ತೆವೆ ಎಂದರು.