
ಶಿರಸಿ : ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಶಿಂಗಟರಾಯಣ ಕೇರಿಯ ಶಿವಾಜಿ ನಗರ ತಾಂಡದಿಂದ ಜೂ.8 ರಂದು ಮಧ್ಯಾಹ್ನ 12 ಘಂಟೆ ಯಿಂದ ಸಂಜು ಶಂಕರ ರಾಠೋಡ, ತಾರಬಾಯಿ ಶಂಕರ ರಾಠೋಡ, ಗೋಪಾಲ ಶಂಕರ ರಾಠೋಡ, ರವಿ ಮನರಾಮ ರಾಠೋಡ, ಸುಭಾಶ ರಮೇಶ ರಾಠೋಡ, ರವಿ ಸುರೇಶ ರಾಠೋಡ ಇವರುಗಳು ಲಕ್ಷೇಶ್ವರ, ಯಲವಗಿ, ಸವಣೂರ ಬಂಕಾಪುರ, ಹಾನಗಲ್ಲ. ದಾಸನಕೊಪ್ಪ ಬಿಸ್ಲಲಕೊಪ್ಪ ಮಾರ್ಗವಾಗಿ ಇಂದು ಶಿರಸಿ ಮಾರಿಕಾಂಬಾ ದೇವಸ್ಥಾನಕ್ಕೆ 11.10 ಘಂಟೆಗೆ ಆಗಮಿಸಿ ವಿಶೇಷ ಪೂಜೆಯನ್ನು ಸಲ್ಲಿಸಿ ಅಲ್ಲಿಂದ ಪಾದಾಯಾತ್ರೆ ಮೂಲಕ 1 ಕೋಣ 2 ಕುರಿ ಮರಿ ಯನ್ನು ದೇವಸ್ಥಾನಕ್ಕೆ ಸಲ್ಲಿಸಿದರು.
ಈ ಕುರಿತು ಅಲ್ಲಿ ಉಪಸ್ಥಿತರಿದ್ದ ಕ್ಷತ್ರಿಯ ಮರಾಠಾ ಮಹಾ ಒಕ್ಕೂಟದ ಜಿಲ್ಲಾಧ್ಯಕ್ಷ ಪಾಂಡುರಂಗ ವ್ಹಿ. ಪಾಟೀಲ್ ವಿಚಾರಿಸಿದಾಗ ನಮ್ಮ ಹಿರಿಯರ ಸಂಕಲ್ಪದಂತೆ ಇಂದು ಈ ಹರಕೆಯನ್ನು ಸಲ್ಲಿಸಿದ್ದೇವೆ. ಶಿರಸಿ ಶ್ರೀದೇವಿ ಸಂಜು ರಾಠೋಡ ಅವರ ಕನಸಿನಲ್ಲಿ ಬಂದು. ನಿಮ್ಮ ಹಿರಿಯರ ಹರಕೆ ಇದೆ. ಅದನ್ನು ತೀರಿಸು ಎಂದಿದ್ದಳು. ಅದರಂತೆ ನಾವು ಹರಕೆಯನ್ನು ತೀರಿಸಿದ್ದೇವೆ. ಅಲ್ಲಿಂದ ಇಲ್ಲಿಯವರೆಗೂ ಪಾದಾಯಾತ್ರಾ ಮೂಲಕ ಆಗಮಿಸಿದ್ದೇವೆ. ಆದರೆ ನಮಗೆ ಯಾವುದೆ ನೋವುಗಳು ಆಗಿರುವುದಿಲ್ಲಾ ಎಂದರು ಎಂದು ಕ್ಷತ್ರಿಯ ಮರಾಠಾ ಮಹಾಒಕ್ಕೂಟದ ಜಿಲ್ಲಾಧ್ಯಕ್ಷ ಪಾಂಡುರಂಗ.ವ್ಹಿ.ಪಾಟೀಲ್ ತಮ್ಮ ಪತ್ರಿಕಾ ಪ್ರಕಟಣಿಯಲ್ಲಿ ತಿಳಿಸಿದ್ದಾರೆ