ಚಿಕ್ಕಬಳ್ಳಾಪುರ, ಜೂ, 12-ಪತಿ ವಿಚ್ಛೇದನಕ್ಕೆ ಪೀಡಿಸುತ್ತಿದ್ದರಿಂದ ಮನನೊಂದ ಪತ್ನಿ ನಂದಿ ಬೆಟ್ಟದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂದಿಗಿರಿ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ದಾವಣಗೆರೆ ಮೂಲದ ಸ್ಮಿತಾ (25) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.
ಎರಡು ವರ್ಷದ ಹಿಂದೆ ಸ್ಮಿತಾ ದಾವಣಗೆರೆಯ ಪವನ್ ಗುಬ್ಬಿ ಎಂಬಾತನನ್ನು ವಿವಾಹವಾಗಿದ್ದು, ಇತ್ತೀಚೆಗೆ ವಿನಾಕಾರಣ ಪತಿ ಆಕೆಯಿಂದ ವಿಚ್ಛೇದನಕ್ಕೆ ಒತ್ತಾಯಿಸುತ್ತಿದ್ದನು ಎನ್ನಲಾಗಿದೆ.
ಪತಿಯಿಂದ ದೂರವಾಗಲು ಇಚ್ಛಿಸದೆ ಮನನೊಂದಿದ್ದಳು. ಪತಿಯಿಂದ ಈಕೆಗೆ ಡೈವೋರ್ಸ್ ನೋಟೀಸ್ ಬಂದಿದ್ದರಿಂದ ವಿಚಲಿತಳಾದ ಸ್ಮಿತಾ, ನಿನ್ನೆ ಬೆಳಗ್ಗೆ ದಾವಣಗೆರೆಯಿಂದ ತನ್ನ ಸ್ನೇಹಿತೆ ಜೊತೆ ಬೆಂಗಳೂರಿಗೆ ಬಂದಿದ್ದಾರೆ. ಸ್ನೇಹಿತೆ ಕೆಲಸದ ನಿಮಿತ್ತ ಹೋದಾಗ, ಇತ್ತ ಸ್ಮಿತಾ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಬೆಟ್ಟಕ್ಕೆ ನಿನ್ನೆ ಮಧ್ಯಾಹ್ನ 12.30ರ ಸಮಯದಲ್ಲಿ ಬಂದು ಟಿಪ್ಪು ಡ್ರಾಪ್ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ವಿಷಯವನ್ನು ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಸ್ಥಳೀಯರು ನಂದಿಗಿರಿ ಪೆÇಲೀಸರಿಗೆ ತಿಳಿಸಿದ್ದಾರೆ.
ಸ್ಥಳಕ್ಕಾಗಮಿಸಿದ ನಂದಿಗಿರಿ ಪೆÇಲೀಸರಿಗೆ ಸ್ಥಳದಲ್ಲಿ ಪತ್ರವೊಂದು ದೊರೆತಿದೆ.
ಆತ್ಮಹತ್ಯೆಗೂ ಮುನ್ನ ಆಕೆ ನಾನು ಪತಿಯಿಂದ ದೂರವಾಗಲು ಇಷ್ಟವಿಲ್ಲದೆ ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ ಎಂದು ಆ ಪತ್ರದಲ್ಲಿ ಬರೆದಿದ್ದಾರೆ. ನಂದಿಗಿರಿ ಠಾಣೆ ಪೆÇಲೀಸರು ಕಾರ್ಯಾಚರಣೆ ನಡೆಸಿ ಶವವನ್ನು ಪತ್ತೆ ಹಚ್ಚಿ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೊಳಪಡಿಸಿದ್ದಾರೆ.
ಪೆÇಲೀಸರು ಕಡಿವಾಣ ಹಾಕಲಿ:
ಇತ್ತೀಚೆಗೆ ನಂದಿ ಬೆಟ್ಟದಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪೆÇಲೀಸರು ಹೆಚ್ಚು ಗಸ್ತು ನಡೆಸುವ ಮೂಲಕ ಇದಕ್ಕೆ ಕಡಿವಾಣ ಹಾಕಬೇಕಿದೆ.
ಮೋಜಿ ಮಸ್ತಿಗೆಂದು ನಂದಿ ಬೆಟ್ಟಕ್ಕೆ ಬರುವವರ ಸಂಖ್ಯೆ ಹೆಚ್ಚಾಗಿದೆ. ವಾಹನಗಳಲ್ಲಿ ಬಂದು ಮದ್ಯಪಾನ ಮಾಡಿ ಅಲ್ಲಲ್ಲಿ ಬಾಟಲಿಗಳನ್ನು ಎಸೆದು ಪರಿಸರ ಕಲುಷಿತಗೊಳಿಸುತ್ತಿದ್ದಾರೆ. ಅಲ್ಲದೆ, ಯಾವುದೋ ಕಾರಣಗಳಿಂದಾಗಿ ಮನನೊಂದು ಆತ್ಮಹತ್ಯೆಗೆ ನಿರ್ಧರಿಸಿ ಈ ಸ್ಥಳಕ್ಕೆ ಬಂದು ಸಾವನ್ನಪ್ಪುತ್ತಿರುವ ಪ್ರಕರಣಗಳು ಇತ್ತೀಚೆಗೆ ಹೆಚ್ಚು ನಡೆಯುತ್ತಿದ್ದು, ಇದಕ್ಕೆ ಪೆÇಲೀಸರು ಕಡಿವಾಣ ಹಾಕಬೇಕಿದೆ.