ಕಾಶ್ಮೀರದಲ್ಲಿ ಉಗ್ರರ ಹೊಂಚು ದಾಳಿ; ಪೊಲೀಸರಿಬ್ಬರು ಹುತಾತ್ಮ 

Kulgam: Soldiers during an operation launched after at least two Indian Army soldiers were killed and three wounded when militants attacked a military vehicle on the Jammu-Srinagar national highway in Kulgam district on June 3, 2017. (Photo: IANS)

ಶ್ರೀನಗರ: ದಕ್ಷಿಣ ಕಾಶ್ಮೀರದ ಪುಲ್ವಾಮದಲ್ಲಿ  ಶಸ್ತ್ರಧಾರಿ ಉಗ್ರರು ಮಂಗಳವಾರ ನಸುಕಿನ ವೇಳೆ  ಪೊಲೀಸರನ್ನು ಗುರಿಯಾಗಿರಿಸಿಕೊಂಡು ಹೊಂಚು ದಾಳಿ ನಡೆಸಿದ್ದು ಇಬ್ಬರು ಪೊಲೀಸರು ಹುತಾತ್ಮರಾಗಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಉಗ್ರರು ದಾಳಿ ನಡೆಸಿದ ಕೂಡಲೇ ಭಾರೀ ಗುಂಡಿನ ಚಕಮಕಿ ನಡೆದಿದ್ದು, ಉಗ್ರರ ಗುಂಪಿನಲ್ಲಿ ಮೂರರಿಂದ ನಾಲ್ಕು ಮಂದಿ ಇದ್ದರೆಂದು ಪೊಲೀಸರು ತಿಳಿಸಿದ್ದಾರೆ.

ಉಗ್ರರು ಸ್ಥಳದಿಂದ ಪರಾರಿಯಾಗಿದ್ದು, ಅವರಿಗೆ ಸೇನಾ ಪಡೆಗಳು ಮತ್ತು ಪೊಲೀಸರು ಭಾರೀ ಕಾರ್ಯಾಚರಣೆಗಿಳಿದಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ