ಮಹದಾಯಿ ವಿವಾದ ಪರಿಹಾರಕ್ಕೆ ವೇದಿಕೆ ಸಿದ್ಧ: ಮೋದಿಯವರು ರಾಜ್ಯದ ರೈತರ ಜೊತೆ ಚರ್ಚಿಸಲಿದ್ದಾರೆ

ಹುಬ್ಬಳ್ಳಿ, ಜೂ, 12-ಉತ್ತರ ಕರ್ನಾಟಕ ಭಾಗದ ದಶಕಗಳ ಬೇಡಿಕೆ ಮಹದಾಯಿ ವಿವಾದ ಪರಿಹಾರಕ್ಕೆ ವೇದಿಕೆ ಸಿದ್ಧಗೊಂಡಿದೆ. ಇದೇ ತಿಂಗಳು 14 ಮತ್ತು 15 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಜ್ಯದ ರೈತರ ಜೊತೆ ಚರ್ಚಿಸಲಿದ್ದಾರೆ.
ಬೆಂಗಳೂರಿನ ಸಹ್ಯಾದ್ರಿ ಜಲಜನ ಸೊಸೈಟಿ ಹಾಗೂ ಮಹದಾಯಿಗಾಗಿ ಮಹಾವೇದಿಕೆ ನೇತೃತ್ವದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಉತ್ತರ ಕರ್ನಾಟಕ ಭಾಗದ ರೈತರು ಭೇಟಿಯಾಗಲಿದ್ದಾರೆ. ನಿವೃತ್ತ ನ್ಯಾ.ಎನ್.ವೆಂಕಟಾಚಲಯ್ಯ ನೇತೃತ್ವದಲ್ಲಿ ರೈತರ ನಿಯೋಗ ಪ್ರಧಾನಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಲು ಸಮಯ ನಿಗದಿಯಾಗಿದೆ.
ಉತ್ತರ ಕರ್ನಾಟಕ ಭಾಗದ 9 ತಾಲೂಕಿನ 23 ಜನ ರೈತರ ಭೇಟಿಗಾಗಿ ಪ್ರಧಾನಿ ಕಚೇರಿಯಲ್ಲಿ 30 ನಿಮಿಷಗಳ ಕಾಲಾವಕಾಶ ನೀಡಿದ್ದು, ರೈತರು ನಡೆಸಿದ ನಿರಂತರ ಹೋರಾಟ ಮಹದಾಯಿ ನೀರಿನ ಹಕ್ಕನ್ನು ಪ್ರತಿಪಾದಿಸಲಿದ್ದಾರೆ.
ಹುಬ್ಬಳ್ಳಿಯಿಂದ 23 ರೈತರ ತಂಡ ಇಂದು ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದು, ನಾಳೆ ಮುಂಜಾನೆ ಬೆಂಗಳೂರಿನಿಂದ ವಿಮಾನದ ಮೂಲಕ ದೆಹಲಿಗೆ ಪ್ರಯಾಣ ಬೆಳೆಸಲಿದೆ. ದೆಹಲಿಯಲ್ಲಿ ಮೊದಲು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ. ನಂತರ ಪ್ರಧಾನಿ ಭೇಟಿಗೆ ಜೂ.14 ಅಥವಾ 15 ರಂದು ಅವಕಾಶ ದೊರೆಯಲಿದೆ ಎಂದು ರೈತ ಮುಖಂಡ ಶಂಕರ್ ಅಂಬಲಿ ಹೇಳಿದ್ದಾರೆ.
ಮಹದಾಯಿ ಹೋರಾಟಗಾರರಾದ ಮಾರುತಿ ಸಾಬಳೆ ಉತ್ತರ ಕರ್ನಾಟಕ 4 ಜಿಲ್ಲೆಯ 9 ತಾಲೂಕಿನ 23 ರೈತ ಮುಖಂಡರು ದೆಹಲಿಗೆ ತೆರಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ