ಪತ್ರಕರ್ತೆ ಗೌರಿಲಂಕೇಶ್ ಹತ್ಯೆ ಪ್ರಕರಣ: ವಿಶೇಷ ತನಿಖಾ ದಳದಿಂದ ಮಹಾರಾಷ್ಟ್ರದಲ್ಲಿ ಶಂಕಿತ ಆರೋಪಿಯೊಬ್ಬನ ಬಂಧನ

 

ಬೆಂಗಳೂರು, ಜೂ.12- ದೇಶಾದ್ಯಂತ ಭಾರೀ ಕೋಲಾಹಲವನ್ನೇ ಸೃಷ್ಟಿಸಿದ್ದ ಸಾಮಾಜಿಕ ಕಾರ್ಯಕರ್ತೆ ಹಾಗೂ ಪತ್ರಕರ್ತೆ ಗೌರಿಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳ (ಎಸ್‍ಐ)ದ ಅಧಿಕಾರಿಗಳು ಮಹಾರಾಷ್ಟ್ರದಲ್ಲಿ ಶಂಕಿತ ಆರೋಪಿಯೊಬ್ಬನನ್ನು ವಶಕ್ಕೆ ಪಡೆದಿದ್ದಾರೆ.
ಮರಾಠಿ ಮಾತನಾಡುವ 30 ವಯಸ್ಸಿನ 5.1 ಅಡಿ ಎತ್ತರ ಹಾಗೂ 70ರಿಂದ 80 ಕೆಜಿ ತೂಕದ ವ್ಯಕ್ತಿಯೊಬ್ಬನನ್ನು ಮಹಾರಾಷ್ಟ್ರದಲ್ಲಿ ವಶಕ್ಕೆ ಪಡೆಯಲಾಗಿದ್ದು, ಹೆಚ್ಚಿನ ವಿಚಾರಣೆಗೆ ಆತನನ್ನು ಬೆಂಗಳೂರಿಗೆ ಎಸ್‍ಐಟಿ ಅಧಿಕಾರಿಗಳು ಕರೆ ತಂದಿದ್ದ್ದಾರೆ.

ಎಸ್‍ಐಟಿ ಅಧಿಕಾರಿಗಳ ಒಂದು ತಂಡ ಮಹಾರಾಷ್ಟ್ರಕ್ಕೆ ತೆರಳಿ ಈ ಹಿಂದೆ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದ ರೇಖಾಚಿತ್ರಕ್ಕೂ ಈತನಿಗೂ ಸಾಕಷ್ಟು ಹೋಲಿಕೆಯಾಗುತ್ತಿರುವುದರಿಂದ ಹೆಚ್ಚಿನ ವಿಚಾರಣೆಗೆ ವಶಕ್ಕೆ ಪಡೆದಿದ್ದೇವೆ ಎಂದು ಹೆಸರು ಬಹಿರಂಗಪಡಿಸಲು ಇಚ್ಚಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗೌರಿಲಂಕೇಶ್ ಬೆಂಗಳೂರಿನ ರಾಜರಾಜೇಶ್ವರಿನಗರದ ನಿವಾಸದಲ್ಲಿ ಹತ್ಯೆಯಾದ ಮೂರು ದಿನಕ್ಕೂ ಮುನ್ನ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದ ಶಂಕಿತ ವ್ಯಕ್ತಿಗಳ ಚಲನವಲನಗಳನ್ನು ಹೆಚ್ಚಿನ ತನಿಖೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು.

ಸಿಸಿ ಟಿವಿಯಲ್ಲಿ 5.1 ಅಡಿ ಎತ್ತರ, 70ರಿಂದ 80 ಕೆಜಿ ತೂಕವಿರುವ ವ್ಯಕ್ತಿಯೊಬ್ಬ ಗೌರಿ ಮನೆ ಹತ್ತಿರ ಶಂಕಾಸ್ಪದವಾಗಿ ತಿರುಗಾಡುತ್ತಿರುವುದು ಕಂಡು ಬಂದಿತ್ತು. ಈತನ ರೇಖಾಚಿತ್ರವನ್ನು ಪೆÇಲೀಸರು ಬೇರೆ ಬೇರೆ ರಾಜ್ಯಗಳಿಗೆ ಕಳುಹಿಸಿಕೊಟ್ಟು ಈ ಶಂಕಿ ವ್ಯಕ್ತಿಯ ಬಗ್ಗೆ ಹೆಚ್ಚಿನ ಮಾಹಿತಿ ನೀಡುವಂತೆ ಕೊರಿದ್ದರು.
ಮಹಾರಾಷ್ಟ್ರದಲ್ಲಿ ಈತ ಅಡಗಿರುವ ಬಗ್ಗೆ ಸ್ಥಳೀಯ ಪೆÇಲೀಸರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ತೆರಳಿದ್ದ ಒಂದು ತಂಡ ಆತನನ್ನು ವಶಕ್ಕೆ ಪಡೆದು ನಗರಕ್ಕೆ ಕರೆತಂದಿದೆ.

ಪೆÇಲೀಸರ ವಶದಲ್ಲಿರುವ ಈತ ಶಂಕಿತ ಆರೋಪಿಯೇ ಹೊರತು ಈತನೇ ಪ್ರಮುಖ ಆರೋಪಿ ಎನ್ನಲು ಸಾಧ್ಯವಿಲ್ಲ. ನಾವು ವಿಚಾರಣೆಗೆ ಒಳಪಡಿಸದ ನಂತರವೇ ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈಗಾಗಲೇ ಎಸ್‍ಐಟಿ ವಶದಲ್ಲಿರುವ ನವೀನ್ ಬಾಯ್ಬಿಟ್ಟಿರುವಂತೆ ಗೌರಿ ಹತ್ಯೆಗೆ ಶಿಕಾರಿಪುರದ ನಿವಾಸಿಯಾದ ಪ್ರವೀಣ್ ಅಲಿಯಾಸ್ ಸುಜಿತ್‍ಕುಮಾರ್, ಪುಣೆಯ ಅಮೂಲ್‍ಕಾಳೆ, ಮಹಾರಾಷ್ಟ್ರದ ಅಮಿತ್ ದೆಗ್ವೇಕ್ಕರ್, ವಿಜಯಪುರದ ಮನೋಹರ್‍ಯಡವಿ ಅವರುಗಳೇ ಪ್ರಮುಖ ಆರೋಪಿಗಳನ್ನು ಎನ್ನಲಾಗುತ್ತಿದೆ.
ಎಸ್‍ಐಟಿ ಇಂಚಿಂಚೂ ಮಾಹಿತಿಯನ್ನು ಕಲೆಹಾಕುತ್ತಿದ್ದು, ಶೀಘ್ರದಲ್ಲೇ ತನಿಖೆಗೆ ಇತಿಶ್ರೀ ಹಾಡಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ