
ಮೈಸೂರು, ಜೂ.12- ಬುರ್ಖಾಧಾರಿ ಮಹಿಳೆಯರಿಬ್ಬರು ಮೈಸೂರು ಸಿಲ್ಕ್ ಸೀರೆಗಳನ್ನು ಕಳವು ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಅಶೋಕಪುರಂನಲ್ಲಿರುವ ಸಿಲ್ಕ್ ಫ್ಯಾಕ್ಟರಿ ಆವರಣದಲ್ಲಿರುವ ರೇಷ್ಮೆ ಸೀರೆ ಮಾರಾಟ ಮಳಿಗೆಯಲ್ಲಿ 49 ಸಾವಿರ ಬೆಲೆ ಬಾಳುವ ಎರಡು ಸೀರೆಗಳನ್ನು ಕಳ್ಳತನ ಮಾಡಿದ್ದಾರೆ.
ಜೂ.7ರಂದು ಮಳಿಗೆಗೆ ಬಂದ ಇಬ್ಬರು ಬುರ್ಖಾಧರಿಸಿದ ಮಹಿಳೆಯರು ವ್ಯಾಪಾರದ ಸೋಗಿನಲ್ಲಿ ಹಲವು ಸೀರೆಗಳನ್ನು ವೀಕ್ಷಿಸಿದ್ದಾರೆ. ಈ ವೇಳೆ ಸಿಬ್ಬಂದಿಯ ಗಮನ ಬೇರೆಡೆ ಸೆಳೆದು 49 ಸಾವಿರ ಮೌಲ್ಯದ ಎರಡು ಸೀರೆಗಳನ್ನು ಕದ್ದು ಪರಾರಿಯಗಿದ್ದಾರೆ.
ಜೂ.10ರಂದು ವ್ಯಾಪಾರದ ನಂತರ ಸೀರೆಗಳನ್ನು ಲೆಕ್ಕ ಹಾಕಿದಾಗ 49 ಸಾವಿರದ ಎರಡು ಸೀರೆಗಳು ಕಡಿಮೆ ಇರುವುದು ತಿಳಿದು ಬಂದಿದೆ. ತಕ್ಷಣವೇ ಸಿಬ್ಬಂದಿಗಳು ಸಿಸಿ ಟಿವಿಯನ್ನು ಪರಿಶೀಲಿಸಿದಾಗ ಮಹಿಳೆಯರು ಸೀರೆಗಳನ್ನು ಅಪಹರಿಸಿರುವುದು ತಿಳಿದು ಬಂದಿದೆ.
ಈ ಬಗ್ಗೆ ವಿದ್ಯಾರಣ್ಯಪುರ ಪೆÇಲೀಸರಿಗೆ ದೂರು ನೀಡಿದ್ದು, ಪೆÇಲೀಸರು ಮಹಿಳೆಯರಿಗಾಗಿ ಹುಡುಕಾಟ ನಡೆಸಿದ್ದಾರೆ.