ಶುದ್ಧ ಕುಡಿಯುವ ನೀರಿನ ಘಟಕಗಳ ಕಾರ್ಯನಿರ್ವಹಣೆ ಮೇಲೆ ನೇರ ನಿಗಾ: ಲೈವ್‍ಮಾನಟರಿಂಗ್ ವ್ಯವಸ್ಥೆ ಜಾರಿ

 

ಬೆಂಗಳೂರು, ಜೂ.12-ಶುದ್ಧ ಕುಡಿಯುವ ನೀರಿನ ಘಟಕಗಳ ಕಾರ್ಯನಿರ್ವಹಣೆ ಮೇಲೆ ನೇರ ನಿಗಾ ವಹಿಸುವ ಲೈವ್‍ಮಾನಟರಿಂಗ್ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣಬೈರೇಗೌಡ ಹೇಳಿದರು.
ವಿಕಾಸಸೌಧದಲ್ಲಿಂದು ಇಲಾಖೆ ಅಧಿಕಾರಿಗಳ ಜತೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗಿಂತಲೂ ಮೊದಲು ಅತ್ಯಂತ ಹಿರಿಯರು, ಅನುಭವಿಗಳು, ದಕ್ಷರು, ಸಾಮಥ್ರ್ಯ ಇರುವವರು ಈ ಇಲಾಖೆ ನಿಭಾಯಿಸಿದ್ದಾರೆ. ಎಚ್.ಕೆ.ಪಾಟೀಲ್, ಎಂ.ವೈ.ಗೋರ್‍ಪಡೆ ಅವರಂಥವರಿಗೆ ಹೋಲಿಸಿದರೆ ನಾನು ಅತ್ಯಂತ ಕಿರಿಯ ಎಂದರು.

ಶುದ್ಧ ಕುಡಿಯುವ ನೀರಿನ ಘಟಕಗಳು ಹಳ್ಳಿಗಳಿಗೆ ವರದಾನ. ಕೆಲವು ಕಡೆ ಅವು ಕಾರ್ಯನಿರ್ವಹಿಸುತ್ತಿಲ್ಲ ಎಂಬ ಆಕ್ಷೇಪವಿದೆ. ವಿದ್ಯುತ್ ಸಂಪರ್ಕ ಇಲ್ಲದೆ ಕೆಟ್ಟುನಿಂತಿರುವ ಘಟಕಗಳ ಸಂಖ್ಯೆ ಕಡಿಮೆ. ಬೋರ್‍ವೆಲ್‍ನಲ್ಲಿ ನೀರು ನಿಂತು ಹೋಗಿ ಅಥವಾ ತಾಂತ್ರಿಕ ಕಾರಣಗಳಿಂದ ನಿಂತು ಹೋಗಿರಬಹುದು. ಅದನ್ನು ಹೊರತು ಪಡಿಸಿ ಘಟಕಗಳು ಉತ್ತಮವಾಗಿ ಕೆಲಸ ಮಾಡುತ್ತಿವೆ. ಯಾವ ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ ಎಂಬುದನ್ನು ನೋಡಿಕೊಳ್ಳಲು ಈಗಾಗಲೇ ಲೈವ್ ಮಾನಟರಿಂಗ್ ವ್ಯವಸ್ಥೆಯನ್ನ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಎಲ್ಲ ಕಡೆ ಅಳವಡಿಸಲಾಗುವುದು ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ