ಹುಬ್ಬಳ್ಳಿ, ಜೂ, 12-ವಾಣಿಜ್ಯ ನಗರಿಯ ಜನರನ್ನು ಬೆಚ್ಚಿ ಬೀಳಿಸಿದ್ದ ಜೋಡಿ ಕೊಲೆ ಪ್ರಕರಣವನ್ನು ಬೇಧಿಸಿರುವ ಪೆÇಲೀಸರು ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇರ್ಷಾದ್ ಮಿಶ್ರಿಕೋಠಿ ಹಾಗೂ ಆತನ ಸ್ನೇಹಿತರಾದ ಮೌಸೀನ್ನವಲೂರು, ಅಖಿಲ್ ಬೇಪಾರಿ ಕೊಲೆ ಆರೋಪಿಗಳು.
ಈ ಆರೋಪಿಗಳು ಪರಾರಿಯಾಗಲು ವಿರೇಶ ಸೊಟ್ನಾನಾಳ್ ನೆರವಾಗಿದ್ದ. ಆ ಕಾರಣಕ್ಕೆ ಈತನನ್ನು ಬಂಧಿಸಲಾಗಿದೆ. ಶಹರ ಠಾಣೆ ಪೆÇಲೀಸರು ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಚಾಕು, ಎರಡು ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಜೂ.8 ರಂದು ಜೆ.ಸಿ.ನಗರದ ಅಜಂತಾ ಹೊಟೇಲ್ ಬಳಿ ಸ್ನೇಹಿತರ ನಡುವೆ ಜಗಳವಾಗಿ ಮಹಮ್ಮದ್ ಫೈರೋಜ್ ಮತ್ತು ರಿಯಾಜ್ ಸವಣೂರನನ್ನು ಸ್ನೇಹಿತರಿಂದೇ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದರು. ಇದರಿಂದ ವಾಣಿಜ್ಯ ನಗರಿಯ ಜನ ಬೆಚ್ಚಿಬಿದ್ದಿದ್ದರು.
ಕೊಲೆ ಪ್ರಕರಣ ತನಿಖೆ ನಡೆಸಿದ ಪೆÇಲೀಸರಿಗೆ ಅಚ್ಚರಿ ಕಾದಿತ್ತು. ಕೇವಲ 10 ಸಾವಿರ ರೂ. ಹಣಕ್ಕಾಗಿ ಈ ಇಬ್ಬರು ಯುವಕರನ್ನು ಹತ್ಯೆ ಮಾಡಲಾಗಿತ್ತು. ಹಣಕಾಸಿನ ವ್ಯವಹಾರದ ಜೊತೆ ಹಳೇ ವೈಷಮ್ಯವೂ ಹತ್ಯೆಗೆ ಕಾರಣವೆಂದು ಗೊತ್ತಾಗಿದೆ.
ಕಾಲೇಜು ವ್ಯಾಸಂಗ ಮಾಡುತ್ತಾ, ಮಹಮ್ಮದ್ ಫೈರೋಜ್ ತಂದೆಗೆ ಅಂಗಡಿ ಕೆಲಸಕ್ಕೂ ನೆರವಾಗುತ್ತಿದ್ದ. ರಿಯಾಜ್ ಸವಣೂರು ರೈಲ್ವೆಯಲ್ಲಿ ಸರಕು ಸಾಗಣೆ ಕೆಲಸ ನಿರ್ವಹಿಸಿ ಕುಟುಂಬಕ್ಕೆ ಆಸರೆಯಾಗಿದ್ದ.
ಈ ಇಬ್ಬರು ಯುವಕರನ್ನು ಇವರ ಸ್ನೇಹಿತರೇ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ.
ಕೊಲೆ ಪ್ರಕರಣ ಭೇದಿಸಿರುವುದಕ್ಕೆ ಮಹಾನಗರ ಪೆÇಲೀಸ್ ಆಯುಕ್ತ ಎಂ.ಎನ್.ನಾಗರಾಜ್, ಸಂತಸ ವ್ಯಕ್ತಪಡಿಸಿ ಪೆÇಲೀಸ್ ತಂಡಕ್ಕೆ 10 ಸಾವಿರ ರೂ. ಬಹುಮಾನ ಘೋಷಿಸಿದ್ದಾರೆ.