
ಪಣಜಿ, ಜೂ.11- ಪೆÇಲೀಸ್ ಕಾನ್ಸ್ಟೆಬಲ್ ಸೇರಿದಂತೆ ಮೂವರು ಪ್ರವಾಸಿಗರು ಜಲಸಮಾಧಿಯಾದ ಘಟನೆ ಗೋವಾ ರಾಜಧಾನಿ ಪಣಜಿ ಸಮೀಪದ ಪ್ರಸಿದ್ಧ ಕಲಾನುಗುಟೆ ಬೀಚ್ನ ಅರಬ್ಬಿ ಸಮುದ್ರದಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ. ಮಹಾರಾಷ್ಟ್ರದ ಅಕೋಲಾದ 14 ಪ್ರವಾಸಿಗರ ಗುಂಪು ಇಂದು ಬೆಳಗ್ಗೆ 4 ಗಂಟೆಗೆ ಗೋವಾಗೆ ಆಗಮಿಸಿತು. ನಂತರ ಅವರು ಇಲ್ಲಿಂದ 9 ಕಿ.ಮೀ. ದೂರದಲ್ಲಿರುವ ಕಲಾನುಗುಂಟೆ ಬೀಚ್ಗೆ ತೆರಳಿ ಸಮುದ್ರಕ್ಕೆ ಇಳಿದರು. ಸಮುದ್ರದ ಸೆಳೆತವಿರುವ ನೀರಿನಲ್ಲಿ ಈಜಾಡದಂತೆ ಎಚ್ಚರಿಕೆ ಸಂದೇಶ ಇದ್ದರೂ ಅದನ್ನು ಲೆಕ್ಕಿಸದೇ ಐವರು ನೀರಿಗಿಳಿದಾಗ ರಭಸದ ಅಲೆಯಲ್ಲಿ ಕೊಚ್ಚಿಕೊಂಡು ಹೋದರು. ಇಬ್ಬರು ಸುರಕ್ಷಿತವಾಗಿ ದಡ ಸೇರಿದರು. ಆದರೆ ಪೆÇಲೀಸ್ ಪೇದೆ ಮತ್ತು ಅವರ ಸಹೋದರ ಸೇರಿ ಮೂವರು ನೀರುಪಾಲಾದರು ಎಂದು ಕಲಾನುಗುಟೆ ಪೆÇಲೀಸ್ ಇನ್ಸ್ಪೆಕ್ಟರ್ ಜೀವ್ಬಾ ದಳವಿ ಹೇಳಿದ್ದಾರೆ.