
ಹುಬ್ಬಳ್ಳಿ : ಇತ್ತಿಚೆಗೆ ಹೊಟೇಲ್ ಮಾಲೀಕರ ಹಾಗೂ ಸಿಬ್ಬಂದಿ ಮೇಲೆ ನಡೆದ ಹಲ್ಲೆ ಖಂಡಿಸಿ ಇಂದು ಹುಬ್ಬಳ್ಳಿ ಧಾರವಾಡ ಹಾಗೂ ಉತ್ತರ ಕರ್ನಾಟಕದ ಹೊಟೇಲ್ ಮಾಲೀಕರ ಸಂಘದಿಂದ ಹೊಟೇಲ್ ಬಂದ್ ಗೆ ಕರೆ ನೀಡಿದೆ. ಹೀಗಾಗಿ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಈತನಕ ಚನ್ನಮ್ಮ ವೃತ್ತ, ಕೋರ್ಟ್ ಸರ್ಕಲ್, ಸೇರಿದಂತೆ ನಗರದ ಯಾವೊಂದು ಹೊಟೆಲ್ ನ ಬಾಗಿಲು ಕೂಡಾ ತೆರೆದಿಲ್ಲ. ಕಳೆದವಾರ ಹುಬ್ಬಳ್ಖಿ ಹಳೇ ಬಸ್ ನಿಲ್ದಾಣ ಬಳಿಯ ಬ್ರಹ್ಮಶ್ರೀ ಹೊಟೇಲನಲ್ಲಿ ಕೆಲ ಪುಂಡರು ಹೊಟೇಲ್ ಮಾಲೀಕರು ಹಾಗೂ ಸಿಬ್ಬಂಧಿ ಮೇಲೆ ಹಲ್ಲೆ ಮಾಡಿದ್ರು. ಹೀಗಾಗಿ ಹೊಟೇಲ್ ಮಾಲೀಕರ ಸಂಘದಿಂದ ಅವಳಿ ನಗರದ ಹೊಟೇಲ್ ಬಂದ್ ಗೆ ಕರೆ ನೀಡಿದ್ರು. ಈ ಹಿನ್ನೆಲೆ ಇಂದು ಹೊಟೇಲ್ ಬಂದ್ ಮಾಡುವ ಮೂಲಕ ಪ್ರತಿಭಟಿಸಿದ್ದಾರೆ. ಅಷ್ಟೇ ಅಲ್ಲದೆ ಕೈಗೆ ಕಪ್ಪು ಬಟ್ಟೆ ಧರಿಸಿ ನಗರದಾದ್ಯಂತ ಪ್ರತಿಭಟನೆ ನಡೆಸಲಿರೋ ಹೊಟೇಲ್ ಸಂಘದವ್ರು ಪ್ರತಿಭಟನಾ ಮೆರವಣಿಗೆ ಮೂಲಕ ತಹಶೀಲ್ದಾರ ಕಛೇರಿಗೆ ತೆರಳಿ ತಹಶಿಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಿದ್ದಾರೆ.