ಹತ್ರಾಸ್ (ಉ.ಪ್ರ.), ಜೂ.10-ಭೂ ವಿವಾದವೊಂದು ಭುಗಿಲೆದ್ದು, ಎರಡು ಗುಂಪುಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಮೃತಪಟ್ಟು, ಕೆಲವರು ತೀವ್ರ ಗಾಯಗೊಂಡಿರುವ ಘಟನೆ ಉತ್ತರಪ್ರದೇಶದ ಹತ್ರಾಸ್ ಜಿಲ್ಲೆಯ ಬೈನಾ ಗ್ರಾಮದಲ್ಲಿ ನಡೆದಿದೆ. ಬ್ರಿಜ್ಮೋಹನ್ (40) ಹಾಗೂ ಪ್ರತಾಪ್ ಸಿಂಗ್ (50) ನಿನ್ನೆ ನಡೆದ ಹಿಂಸಾಚಾರದಲ್ಲಿ ಗುಂಡೇಟಿಗೆ ಬಲಿಯಾದರು. ರಾಜ್ಕುಮಾರ್ ಯಾದವ್ ಎಂಬುವರು ತೀವ್ರ ಗಾಯಗೊಂಡಿದ್ದು, ಅವರ ಸ್ಥಿತಿ ಶೋಚನೀಯವಾಗಿದೆ. ಈ ಘಟನೆ ನಂತರ ಗ್ರಾಮ ಪ್ರಕ್ಷುಬ್ಧಗೊಂಡಿದ್ದು, ವ್ಯಾಪಕ ಪೆÇಲೀಸ್ ಬಂದೋಬಸ್ತ್ ಮಾಡಲಾಗಿದೆ.