
ಜಮ್ಮು, ಜೂ.10-ಆಕಸ್ಮಿಕವಾಗಿ ನೆಲಬಾಂಬ್ ತುಳಿದ ಪರಿಣಾಮ ಕೆಲವು ಯೋಧರು ಗಾಯಗೊಂಡಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ನಿನ್ನೆ ಸಂಭವಿಸಿದೆ.
ಸಬ್ಜಿಯಾನ್ ಸೆಕ್ಟರ್ನ ಮುಂಚೂಣಿ ಪ್ರದೇಶದಲ್ಲಿ ಯೋಧರು ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳುತ್ತಿದ್ದರು.
ಗಡಿಯಲ್ಲಿ ಉಗ್ರರು ಒಳನುಸುಳುವುದನ್ನು ತಡೆಯಲು ನೆಲಬಾಂಬ್ಗಳನ್ನು ಇಡಲಾಗಿತ್ತು. ಯೋಧರು ಆಕಸ್ಮಿಕವಾಗಿ ಅದರ ಮೇಲೆ ಕಾಲಿಟ್ಟಾಗ ಅದು ಸ್ಫೋಟಗೊಂಡು ಕೆಲವರು ಗಾಯಗೊಂಡರು.
ಗಾಯಗಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ.