
ತಿರುವನಂತಪುರಂ, ಜೂ.10- ಕೇರಳದ ವಿವಿಧೆಡೆ ವರುಣನ ರುದ್ರಾವತಾರ ಮುಂದುವರಿದಿದ್ದು, ಈವರೆಗೆ ಧಾರಾಕಾರ ಮಳೆಗೆ 10 ಮಂದಿ ಮೃತಪಟ್ಟು, ಅನೇಕರು ಗಾಯಗೊಂಡಿದ್ದಾರೆ.
ತಿರುವನಂತಪುರಂ ಮತ್ತು ಅಳಪುಳ್ಳ ಜಿಲ್ಲೆಗಳಲ್ಲಿ ಮಳೆಯಿಂದ ಹೆಚ್ಚು ಸಾವು-ನೋವು ಸಂಭವಿಸಿದೆ. ರಾಜ್ಯದ ಅನೇಕ ಜಿಲ್ಲೆಗಳಲ್ಲಿ ವರುಣನ ಆರ್ಭಟ ತೀವ್ರಗೊಂಡಿದ್ದು, ನದಿಗಳು ಭೋರ್ಗರೆಯುತ್ತಿವೆ.
ಮಳೆಯಿಂದಾಗಿ ಇಡುಕ್ಕಿ, ಕಲ್ಲಿಕೋಟೆ, ಕಲ್ಲೂರು ಜಿಲ್ಲೆಗಳಲ್ಲಿ ಬೆಳೆಗಳಿಗೆ ವ್ಯಾಪಕ ಹಾನಿಯಾಗಿದ್ದು, ಕೋಟ್ಯಂತರ ರೂಪಾಯಿ ನಷ್ಟ ಸಂಭವಿಸಿದೆ. ಅನೇಕ ಕಡೆ ಮರಗಳು, ವಿದ್ಯುತ್ ಕಂಬಗಳು ಉರುಳಿ ಮನೆಗಳು ಕುಸಿದು ಬಿದ್ದಿವೆ. ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ಯುದ್ಧೋಪಾದಿಯಲ್ಲಿ ಸಾಗಿದೆ.