
ಮೈಸೂರು, ಜೂ.10-ಚಾಮುಂಡಿ ಬೆಟ್ಟದ ತಪ್ಪಲು ಹಾಗೂ ಮೆಟ್ಟಿಲುಗಳು ಸೇರಿದಂತೆ ಎಲ್ಲೆಡೆ ಸ್ವಚ್ಛತಾ ಕಾರ್ಯವನ್ನು ಇಂದು ಮೈಸೂರು ಯುವ ಬ್ರಿಗೇಡ್ ಕಾರ್ಯಕರ್ತರು ಕೈಗೊಂಡರು.
ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಪ್ರವಾಸಿಗರು ಪ್ಲಾಸ್ಟಿಕ್ ವಸ್ತುಗಳು ಹಾಗೂ ಮದ್ಯದ ಬಾಟಲಿಗಳನ್ನು ಹಾಕಿರುವುದನ್ನು ಸ್ವಚ್ಛಗೊಳಿಸಿದ್ದಲ್ಲದೆ, ಸಾರ್ವಜನಿಕರು ಓಡಾಡುವ ರಸ್ತೆಯಲ್ಲಿ ಬೆಳೆದಿರುವ ಗಿಡಗಂಟೆಗಳನ್ನು ಕಿತ್ತು ಸ್ವಚ್ಛ ಗೊಳಿಸಲಾಯಿತು. ಪ್ರವಾಸಕ್ಕೆ ಬರುವ ಪ್ರೇಮಿಗಳು ಬೆಟ್ಟದ ಮೆಟ್ಟಿಲು ಹಾಗೂ ವಿಶ್ರಾಂತಿ ಮಂಟಪಗಳಲ್ಲಿ ಬರೆದಿರುವ ಹೆಸರು, ಬರಹಗಳಿಗೆ ಬಣ್ಣ ಬಳಿಯುವ ಮೂಲಕ ಸ್ವಚ್ಛಗೊಳಿಸಿ ದೇವಾಲಯಕ್ಕೆ ಬರುವವರಿಗೆ ಪಾವಿತ್ರ್ಯತೆ ಕಾಪಾಡಲು ಅನುವಾಗುವಂತೆ ವಾತಾವರಣ ನಿರ್ಮಿಸಲಾಯಿತು.