ಚನ್ನಪಟ್ಟಣ, ಜೂ.10- ಮೈಸೂರಿನಿಂದ ಬೆಂಗಳೂರಿಗೆ ತೆರಳಬೇಕಿದ್ದ ಮಾಲ್ಗುಡಿ ಎಕ್ಸ್ಪ್ರೆಸ್ ರೈಲಿನ ವಿದ್ಯುತ್ ಬೋಗಿಗೆ ನವಿಲು ಸಿಕ್ಕಿಕೊಂಡ ಪರಿಣಾಮ 30 ನಿಮಿಷಕ್ಕೂ ಹೆಚ್ಚು ಕಾಲ ರೈಲು ಕೆಟ್ಟು ನಿಂತ ಘಟನೆ ಪಟ್ಟಣದಲ್ಲಿ ನಡೆದಿದೆ.
ಪ್ರತಿ ದಿನ ಮೈಸೂರಿನಿಂದ ಬೆಂಗಳೂರು ಮಾರ್ಗವಾಗಿ ಸಂಚಾರ ಮಾಡುವ ಮಾಲ್ಗುಡಿ ಎಕ್ಸ್ಪ್ರೆಸ್ ಚನ್ನಪಟ್ಟಣ ರೈಲು ನಿಲ್ದಾಣ ಆಗಮಿಸುವಾಗ ಚನ್ನಪಟ್ಟಣ ರೈಲು ನಿಲ್ದಾಣದ ಕ್ರಾಸಿಂಗ್ನಲ್ಲಿ ಬಂದಾಗ ಎಲೇಕೇರಿ ತೋಟದ ಭಾಗದಿಂದ ಹಾರಿ ಬಂದ ನವಿಲೊಂದು ರೈಲಿನ ವಿದುತ್ ಬೋಗಿಗೆ ಸಿಲುಕಿದೆ. ಈ ವೇಳೆ ರೈಲಿನ ವಿದ್ಯುತ್ ಸಂಪರ್ಕ ಕಡಿತವಾಗಿ ರೈಲು ಕೆಲ ದೂರ ಸಾಗಿ ನಿಂತಿತು.
ನಿಲ್ದಾಣದಲ್ಲಿ ಇಳಿಯಲು ಸಜ್ಜಾಗಿದ್ದ ರೈಲಿನಲ್ಲಿನ ಪ್ರಯಾಣಿಕರಿಗೆ ರೈಲುಒಮ್ಮೆಲೆ ಸ್ಥಗಿತವಾಗಿದ್ದು ಗಾಬರಿ ಉಂಟು ಮಾಡಿತ್ತು. ರೈಲು ನಿಂತ ಬಳಿಕ ಪ್ರಯಾಣಿಕರು ಗಾಬರಿಯಿಂದ ಇಳಿದು ಪ್ಲಾಟ್ಫಾರಂನತ್ತ ಓಡಿದ್ದಾರೆ.
ರೈಲು ಏಕಾಏಕಿ ವಿದ್ಯುತ್ ಸಂಪರ್ಕ ಕಡಿತದಿಂದ ನಿಂತಿದ್ದರಿಂದ ರೈಲಿನ ಚಾಲಕರಿಗೂ ಗಾಬರಿಯಾಗಿ ತಮ್ಮ ಮೇಲಧಿಕಾರಿ ಹಾಗೂ ಚನ್ನಪಟ್ಟಣ ರೈಲ್ವೆ ಅಧಿಕಾರಿ-ಪೆÇಲೀಸ್ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.
ಬಳಿಕ ರೈಲಿನಲ್ಲಿ ಏಕಾಏಕಿ ವಿದ್ಯುತ್ ಸಂಪರ್ಕ ಕಡಿತವಾಗಲು ಕಾರಣ ಏನು ಎಂಬುದನ್ನು ಪರಿಶೀಲನೆ ಮಾಡಲು ಮುಂದಾಗಿ ಸತತ ಒಂದು 30 ನಿಮಿಷಗಳ ಶೋಧನೆ ರೈಲಿನ ವಿದ್ಯುತ್ ಬೋಗಿಗೆ ನವಿಲೊಂದು ಸಿಲುಕಿಕೊಂಡು ಸಾವನ್ನಪ್ಪಿರುವುದು ಕಂಡು ಬಂದಿತು. ಬಳಿಕ ನವಿಲನ್ನು ತೆಗೆದ ರೈಲ್ವೆ ಚಾಲಕರು ರೈಲು ಚಾಲನೆಗೆ ಮುಂದಾದರು ಆದರೆ ರೈಲು ಇಂಜಿನ್ ಚಾಲನೆ ಆಗಲಿಲ್ಲ.
ಈ ವೇಳೆ ಮತ್ತೂ ಪರಿಶೀಲನೆ ಮಾಡಲಾಗಿ ರೈಲಿನ ಕೆಳಗೆ ಕೊಕ್ಕರೆಯೊಂದು ಸಿಲುಕಿ ಕೆಳಭಾಗದ ವಿದ್ಯುತ್ ಸಂಚಾರ ತಂತಿಗೆ ಸಿಲುಕಿದ್ದು, ಕಂಡು ಬಂದಿತು. ಬಳಿಕ ರೈಲು ಚಾಲನೆಯಾಗಿ ನಿಲ್ದಾಣದಿಂದ ಹೊರಟಿತು.
ಎರಡು ಪಕ್ಷಿಗಳು ಮಾಲ್ಗುಡಿ ಎಕ್ಸ್ಪ್ರೆಸ್ಗೆ ಬಲಿಯಾಗಿ ರೈಲು 30 ನಿಮಿಷಕ್ಕೂ ಹೆಚ್ಚುಕಾಲ ನಿಲ್ದಾಣದ ಕ್ರಾಸಿಂಗ್ನಲ್ಲಿ ನಿಂತಿತ್ತು. ಈ ವೇಳೆ ಯಾವುದೇ ರೈಲು ಸಂಚಾರ ಮಾಡದಂತೆ ರೈಲ್ವೇ ಅಧಿಕಾರಿಗಳು ಎಚ್ಚರಿಕೆ ಮಾಹಿತಿ ನೀಡಿದ್ದರು.