
ನವದೆಹಲಿ, ಜೂ.10-ಭಾರತೀಯ ತಂತ್ರಜ್ಞಾನ ಸಂಸ್ಥೆ(ಐಐಟಿ) ಇಂದು ಜಂಟಿ ಪ್ರವೇಶ ಪರೀಕೆ(ಜೆಇಇ) ಪರೀP್ಷÁ ಫಲಿತಾಂಶ ಪ್ರಕಟಿಸಿದ್ದು, ಹರ್ಯಾಣದ ಪಂಚಕುಲ ಜಿಲ್ಲೆಯ ಪ್ರಣವ್ ಗೋಯೆಲ್ ಪ್ರಥಮ ಶ್ರೇಣಿ ಗಳಿಸಿದ್ದಾನೆ. 360 ಅಂಕಗಳಿಗೆ ಆತ 337 ಮಾಕ್ರ್ಸ್‍ಗಳನ್ನು ಪಡೆದಿದ್ದಾನೆ.
ರಾಜಸ್ತಾನದ ಕೋಟಾದ ಸಹಿಲ್ ಜೈನ್ ಹಾಗೂ ದೆಹಲಿಯ ಕೈಲಾಶ್ ಗುಪ್ತಾ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನಗಳನ್ನು ಗಳಿಸಿದ್ದಾರೆ. ಕೋಟಾ ಜಿಲ್ಲೆಯ ಮೀನಾಲ್ ಪರೇಕ್ 318 ಅಂಕಗಳೊಂಧಿಗೆ ಮಹಿಳೆಯರಲ್ಲಿ ಟಾಪರ್ ಆಗಿದ್ದಾರೆ. ಮೇ 20ರಂದು ದೇಶಾದ್ಯಂತ ಜೆಇಇ ಪರೀಕ್ಷೆಗಳನ್ನು ನಡೆಸಲಾಗಿತ್ತು. ಹಾಜರಾದ 1.55 ಲಕ್ಷ ಜನರಲ್ಲಿ 18,138 ವಿದ್ಯಾರ್ಥಿಗಳು ಮಾತ್ರ ಉತ್ತೀರ್ಣರಾಗಿದ್ದಾರೆ.