ಅಕ್ರಮ ಚಟುವಟಿಕೆ ವಿರುದ್ಧ ದನಿ ಎತ್ತಿದ್ದ ಬಿಜೆಪಿ ಶಸಕರಿಗೆ ಬೆದರಿಕೆ ಕರೆ

ಕೊಪ್ಪಳ, ಜೂ.10- ಇತ್ತೀಚೆಗಷ್ಟೆ ಅಕ್ರಮ ಮದ್ಯ ಮಾರಾಟ ಮತ್ತು ಇನ್ನಿತರ ಅಕ್ರಮ ಚಟುವಟಿಕೆ ವಿರುದ್ಧ ದನಿ ಎತ್ತಿದ್ದ ಬಿಜೆಪಿ ಶಸಕರಿಗೆ ಬೆದರಿಕೆ ಕರೆ ಬಂದಿದೆ.
ಕೊಪ್ಪಳ ಜಿಲ್ಲೆ, ಗಂಗಾವತಿ ವಿಧಾನಸಭಾ ಕ್ಷೇತ್ರದ ಶಾಸಕ ಪರಣ್ಣ ಮನವಳ್ಳಿಗೆ ಬೆದರಿಕೆ ಅಷ್ಟೇ ಅಲ್ಲದೆ ಹಣ ಕಳುಹಿಸುವಂತೆ ಎಚ್ಚರಿಕೆಯ ಪತ್ರ ಕೂಡ ಬಂದಿದೆ.
ಮೊದಲು 08497024826 ನಂಬರ್‍ನಿಂದ ಕರೆ ಮಾಡಿದ ವ್ಯಕ್ತಿ ಏಕವಚನದಲ್ಲಿ ಮಾತನ್ನು ಪ್ರಾರಂಭ ಮಾಡಿದ್ದಾನೆ. ನಾಳೆ ನಮ್ಮ ಹುಡುಗರು ಬರುತ್ತಾರೆ, ಅವರ ಹತ್ತಿರ ಹಣ ಕೊಟ್ಟು ಕಳುಹಿಸು. ಪೆÇಲೀಸರಿಗೇನಾದರೂ ತಿಳಿಸಿದರೆ ಕಥೆನೇ ಬೇರೆ ಆಗುತ್ತದೆ ಎಂದು ಕರೆ ಮಾಡಿದ್ದಾನೆ.
ನಂತರ ಮನೆಗೆ ಒಂದು ಲೆಟರ್ ಕೂಡ ಬಂದಿದೆಯಂತೆ. ಯಾರೋ ಅನಾಮಿಕ ವ್ಯಕ್ತಿಯೊಬ್ಬ ಬಂದು ವಾಚ್‍ಮನ್ ಕೈಯಲ್ಲಿ ಲೆಟರ್ ಕೊಟ್ಟು ಪರಣ್ಣ ಅವರಿಗೆ ಕೊಡಿ ಎಂದು ಹೇಳಿ ಅಲ್ಲಿಂದ ಪರಾರಿಯಾಗಿದ್ದಾನೆ.
ಲೆಟರ್‍ನಲ್ಲಿ ಕೋಬ್ರಾ ಟೀಂ ಎಂದು ಬರೆದು 500ರೂ. ಮುಖಬೆಲೆಯ ನಾಲ್ಕೂ ಖೋಟಾನೋಟುಗಳನ್ನಿಟ್ಟು ನಮ್ಮ ನಿಮ್ಮ ಬಿಜಿನೆಸ್ ಮುಂದುವರಿಸೋಣ ಎಂದು ಬರೆದಿದ್ದರಂತೆ. ಇದಾವುದೂ ನನಗೆ ಸಂಬಂಧಿಸಿದ ವಿಚಾರಗಳು. ಯಾರೋ ನನ್ನನ್ನು ಬ್ಲಾಕ್‍ಮೇಲ್ ಮಾಡಲು ಈ ರೀತಿ ಮಾಡಿದ್ದಾರೆ ಎಂದು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಮತ್ತು ಹೆಚ್ಚುವರಿ ಪೆÇಲೀಸ್ ವರಿಷ್ಠಾಧಿಕಾರಿ ಅವರಿಗೆ ತಿಳಿಸಿದ್ದು, ಗಂಗಾವತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇನೆ ಎಂದು ಶಾಸಕ ಪರಣ್ಣ ಮನವಳ್ಳಿ ಹೇಳಿದ್ದಾರೆ.
ಪ್ರಕರಣದ ಬೆನ್ನು ಹತ್ತಿರುವ ಪೆÇಲೀಸರು ಬಳ್ಳಾರಿ ಮೂಲದ ಓರ್ವ ಹಾಗೂ ಸ್ಥಳೀಯ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ