
ಮುಂಬೈ:ಜೂ-10: ಮಹಾರಾಷ್ಟ್ರದ ಇಘಾತ್ಪುರಿ ರೈಲು ನಿಲ್ದಾಣದ ಬಳಿ ಮುಂಬೈ– ಹೌರಾ ಮೇಲ್ ರೈಲು ಹಳಿ ತಪ್ಪಿದೆ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಗಳು ಸಂಭವಿಸಿಲ್ಲ
ಇಂದು ಬೆಳಗಿನಜಾವ ಈ ಅವಘಡ ಸಂಭವಿಸಿದೆ. ನಾಗ್ಪುರದ ಮೂಲಕ ಚಲಿಸುವ ಈ ರೈಲಿನ ಮೂರು ಬೋಗಿಗಳು ಹಳಿತಪ್ಪಿದ್ದು, ಯಾವುದೇ ಜೀವಹಾನಿಯಾಗಿಲ್ಲ ಎನ್ನಲಾಗಿದೆ. ಸ್ಥಳಕ್ಕೆ ಭದ್ರತಾ ಸಿಬ್ಬಂದಿ ತೆರಳಿದ್ದು, ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಘಟನೆಯಿಂದಾಗಿ ಈ ಮಾರ್ಗದಲ್ಲಿ ಸಂಚರಿಸಬೇಕಿದ್ದ 12 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಒಂದು ರೈಲನ್ನು ಬೇರೊಂದು ಮಾರ್ಗದ ಮೂಲಕ ಕಳುಹಿಸಲಾಗಿದೆ.