ಮೈಸೂರು:ಜೂ-೧೦: ಮತ್ತೊಂದು ದಾಖಲೆಗಾಗಿ ಮೈಸೂರಿನಲ್ಲಿ ಯೋಗದ ಪೂರ್ವಾಭ್ಯಾಸ ಆರಂಭವಾಗಿದೆ. ಮೈಸೂರು ಅರಮನೆ ಮುಂಭಾಗ ವಿಶ್ವ ದಾಖಲೆಯ ಯೋಗಾಸನ ಕಾರ್ಯಕ್ರಮಕ್ಕಾಗಿ ಪೂರ್ವ ತಾಲೀಮು ನಡೆಯುತ್ತಿದೆ.
ಕಳೆದ ಬಾರಿಯ ವಿಶ್ವ ಯೋಗದಿನದಂದು ಗಿನ್ನಿಸ್ ದಾಖಲೆ ಮಾಡಿದ್ದ ಮೈಸೂರು. ಈಗ ಮತ್ತೊಂದು ದಾಖಲೆ ನಿರ್ಮಿಸಲು ತಯಾರಿ ನಡೆಸಿದೆ.
ಆಯುಷ್ ಇಲಾಖೆ, ನೆಹರು ಯುವ ಕೇಂದ್ರ ಮತ್ತು ಮೈಸೂರು ಯೋಗ ಸಂಸ್ಥೆಗಳಿಂದ ತಾಲೀಮು ಆರಂಭವಾಗಿದ್ದು, 2 ಸಾವಿರಕ್ಕೂ ಹೆಚ್ಚು ಯೋಗಪಟುಗಳಿಂದ ಯೋಗ ತಾಲೀಮು ನಡೆದಿದೆ.
ಇದೇ ತಿಂಗಳ 21 ರಂದು ನಡೆಯಲಿರುವ ವಿಶ್ವ ಯೋಗ ದಿನಾಚರಣೆ ಹಿನ್ನಲೆಯಲ್ಲಿ ಈ ಬಾರಿಯೂ ವಿಶ್ವದಾಖಲೆಗೆ ಮೈಸೂರು ಸಿದ್ಧತೆ ನಡೆಸಿದೆ.
ಕಳೆದ ವರ್ಷ 56 ಸಾವಿರ ಮಂದಿ ಯೋಗ ಮಾಡುವುದರ ಮೂಲಕ ಗಿನ್ನಿಸ್ ದಾಖಲೆಯಾಗಿತ್ತು. ಈ ಬಾರಿ 70 ಸಾವಿರಕ್ಕೂ ಹೆಚ್ಚು ಯೋಗಪಟುಗಳನ್ನು ಸೇರಿಸುವ ಚಿಂತನೆ ನಡೆಸಿದೆ.