ಮಂಗಳೂರುಜೂ-10: ದಕ್ಷಿಣ ಕನ್ನಡದ ಬಿಸಿ ರೋಡ್ ನಲ್ಲಿ ನಡೆದಿದ್ದ RSS ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.
ಈ ಹತ್ಯೆಗೆ ಸಂಬಂಧಿಸಿದಂತೆ ಹತ್ಯೆಗೀಡಾದ ಶರತ್ ತಂದೆ ತನಿಯಪ್ಪ ಮಡಿವಾಳ ಈ ಕೊಲೆಯನ್ನು ಮಾಜಿ ಸಚಿವ ಬಿ.ರಮಾನಾಥ ರೈ ಮತ್ತು ಅವರ ಬೆಂಬಲಿಗರು ಮಾಡಿಸಿದ್ದಾರೆ ಎಂದು ಕೆಲ ಸಮಯದ ಹಿಂದೆ ಆರೋಪಿಸಿದ್ದರು.
ಇದರಿಂದ ಮನನೊಂದಿರುವ ಮಾಜಿ ಸಚಿವ ಬಿ.ರಮಾನಾಥ ರೈ, ಕಾರಣಿಕ ಕ್ಷೇತ್ರ ಶ್ರೀ ನಾಲ್ಕರ್ ದೈವಸ್ಥಾನ ಕಾಣತ್ತೂರಿಗೆ ಭೇಟಿ ನೀಡಿ ದೂರೊಂದನ್ನ ನೀಡಿದ್ದಾರೆ.
ಈ ಪ್ರಕರಣದಲ್ಲಿ ವಿನಾಕಾರಣ ನನ್ನ ಹೆಸರನ್ನು ಬಳಸಿ ಅಪಪ್ರಚಾರ ನಡೆಸಲಾಗಿದೆ. ಇದರಿಂದ ಮಾನಸಿಕವಾಗಿ ನನಗೆ ತೀವ್ರ ನೋವಾಗಿದೆ. ನಾನು ತಪ್ಪು ಮಾಡಿದ್ದರೆ ನನಗೆ ಶಿಕ್ಷೆಯಾಗಬೇಕು. ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಿರುವವರನ್ನು ಕರೆದು ವಿಚಾರಣೆ ನಡೆಸಬೇಕು ಎಂದು ಬಿ.ರಮಾನಾಥ ರೈ, ದೈವಸ್ಥಾನದ ಪ್ರಮುಖರಲ್ಲಿ ವಿನಂತಿ ಮಾಡಿದ್ದಾರೆ.