ರನ್‍ಅಡಿಕ್ಟ್ಸ್‍ನ್ ಎರಡನೇ ವಾರ್ಷಿಕ ರನ್ ಅನ್ನು ನಾಳೆ ರಾಜರಾಜೇಶ್ವರಿ ನಗರದಲ್ಲಿ ಆಯೋಜಿಸಲಾಗಿದೆ ಎಂದು ರನ್‍ಅಡಿಕ್ಟ್ಸ್‍ನ್ ಅಧ್ಯಕ್ಷ ಸುಧೀರ ಅವರು ತಿಳಿಸಿದರು

Varta Mitra News

 

ಬೆಂಗಳೂರು, ಜೂ.9-ರನ್‍ಅಡಿಕ್ಟ್ಸ್‍ನ್ ಎರಡನೇ ವಾರ್ಷಿಕ ರನ್ ಅನ್ನು ನಾಳೆ ರಾಜರಾಜೇಶ್ವರಿ ನಗರದಲ್ಲಿ ಆಯೋಜಿಸಲಾಗಿದೆ ಎಂದು ರನ್‍ಅಡಿಕ್ಟ್ಸ್‍ನ್ ಅಧ್ಯಕ್ಷ ಸುಧೀರ ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಗ್ರಾಮೀಣ ಮಗುವಿಗೆ ಶಿಕ್ಷಣ ಎಂಬ ಟ್ಯಾಗ್ ಲೈನ್‍ನೊಂದಿಗೆ ರನ್‍ಅಡಿಕ್ಟ್ಸ್ 2ನೇ ವಾರ್ಷಿಕ ರನ್ ಏರ್ಪಡಿಸಿದ್ದು ರನ್‍ನಲ್ಲಿ 3.300 ಕ್ಕೂ ಹೆಚ್ಚು ಸ್ಪರ್ಧಿಗಳು ಓಡಲಿದ್ದಾರೆ ಎಂದು ತಿಳಿಸಿದರು.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಪಾಲ್ಗೊಳ್ಳುವರ ಸಂಖ್ಯೆ ಹೆಚ್ಚಾಗಿದೆ ಈ ಬಾರಿ ರನ್‍ನಲ್ಲಿ 10 ಕಿಲೋ ಮೀಟರ್, 5 ಕಿಲೋಮೀಟರ್, 3ಕಿಲೋಮೀಟರ್ ಓಟದ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು ಇದರೊಂದಿಗೆ ಜಾನಪದ, ಸಂಗೀತ ಹಾಗೂ ಝುಂಭಾ ಸೆಶನ್ ಕೂಡ ಏರ್ಪಡಿಸಲಾಗಿದೆ ಎಂದರು.
ಪರಿಸರ ಸಂರಕ್ಷಣೆ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು ಈ ಕಾರ್ಯಕ್ರಮಕ್ಕೆ ರನ್‍ನಲ್ಲಿ ರಾಷ್ಟ್ರೀಯ ಕ್ರಿಡಾಪಟುಗಳು ಹಾಗೂ ರಾಜರಾಜೇಶ್ವರಿ ನಗರದ ಗಣ್ಯರು ಸೇರಿದಂತೆ ಸಮಾಜದ ವಿವಿಧ ಕ್ಷೇತ್ರಗಳ ಮುಖಂಡರು ಪಾಲ್ಗೊಳ್ಳಲಿದ್ದಾರೆ.

ಬಿಜಿಎಸ್ ಗ್ಲೆನ್‍ಈಗಲ್ಸ್ ಗ್ಲೋಬಲ್ ಹಾಸ್ಪೆಟಲ್ಸ್, ರೈಸ್ ಫೌಂಡೇಶನ್ ಗ್ರೀನ್ ಈವೆಂಟ್ ಸಹಯೋಗದೊಂದಿಗೆ ಸ್ಪರ್ಧಿಗಳ ಸುರಕ್ಷತೆ ಮತ್ತು ತುರ್ತು ಚಿಕಿತ್ಸೆಗಾಗಿ ಅಂಬ್ಯುಲೆನ್ಸ್, ವ್ಯವಸ್ಥೆ ಮಾಡಲಾಗಿದ್ದು, ವೈದ್ಯಕೀಯ ಸಿಬ್ಬಂದಿಯು ಸ್ಪರ್ಧಿಗಳ ಕಾಳಜಿ ವಹಿಸಲಿದ್ದಾರೆ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ